ರಾಜ್ಯದಲ್ಲಿ ಕೊರೊನಾ ಬ್ಲಾಸ್ಟ್ : ಇಂದು 4,991 ಮಂದಿಗೆ ಕೊರೊನಾ
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಕೂಡ 4 ಸಾವಿರದ ಗಡಿ ದಾಟಿದೆ.
ರಾಜ್ಯ ಆರೋಗ್ಯ ಇಲಾಖೆ ಪ್ರಕಾರ, ಇಂದು ರಾಜ್ಯದಲ್ಲಿ 4,991 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಮಹಾಮಾರಿಗೆ 6 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ 10,06,229ಕ್ಕೆ ಏರಿಯಾಗಿದೆ. ಇದುವರೆಗೂ ಕೊರೊನಾಗೆ 12,591 ಮಂದಿ ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿನ್ನೂ 34,219 ಸಕ್ರಿಯ ಪ್ರಕರಣಗಳಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲಾವಾರು ವರದಿ
ಬಾಗಲಕೋಟೆ 13, ಬಳ್ಳಾರಿ 34, ಬೆಳಗಾವಿ 35, ಬೆಂಗಳೂರು ಗ್ರಾಮಾಂತರ 69, ಬೆಂಗಳೂರು ನಗರ 3,509, ಬೀದರ್ 126, ಚಾಮರಾಜನಗರ 13, ಚಿಕ್ಕಬಳ್ಳಾಪುರ 10, ಚಿಕ್ಕಮಗಳೂರು 47, ಚಿತ್ರದುರ್ಗ 22, ದಕ್ಷಿಣ ಕನ್ನಡ 105, ದಾವಣಗೆರೆ 21, ಧಾರವಾಡ 62, ಗದಗ 16, ಹಾಸನ 102, ಹಾವೇರಿ 8, ಕಲಬುರಗಿ 105, ಕೊಡಗು 3, ಕೋಲಾರ 74, ಕೊಪ್ಪಳ 6, ಮಂಡ್ಯ 58, ಮೈಸೂರು 174, ರಾಯಚೂರು 27, ರಾಮನಗರ 5, ಶಿವಮೊಗ್ಗ 37, ತುಮಕೂರು 142, ಉಡುಪಿ 95, ಉತ್ತರ ಕನ್ನಡ 25, ವಿಜಯಪುರ 30 ಮತ್ತು ಯಾದಗಿರಿಯಲ್ಲಿ 18 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ.









