14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕೋವಿಡ್ ಆತಂಕ
14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕೋವಿಡ್ ಆತಂಕ ಕಾಡುತ್ತಿದೆ. ವಾಂಖೆಡೆ ಮೈದಾನದ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
Franchises wary as Wankhede ground staff test positive for COVID-19
ಇದು ಐಪಿಎಲ್ ಟೂರ್ನಿಗೆ ಆಘಾತವನ್ನುಂಟು ಮಾಡಿದೆ. ಇನ್ನೊಂದೆಡೆ ಮಹಾರಾಷ್ಟ್ರ ಸೇರಿದಂತೆ ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕು ಹೆಚ್ಚಳವಾಗುತ್ತಿದೆ. ಹೀಗಾಗಿ ಈ ಬಾರಿಯ ಐಪಿಎಲ್ ಟೂರ್ನಿಗೆ ಕಾರ್ಮೋಡದಂತೆ ಕೋವಿಡ್ ಕಾಡುತ್ತಿದೆ.
ಏಪ್ರಿಲ್ 9ರಿಂದ ಚೆನ್ನೈನಲ್ಲಿ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಮುಖಾಮುಖಿ ನಡೆಯಲಿದೆ.
ಕೋವಿಡ್ ಮಾರ್ಗಸೂಚಿಗಳನ್ನು ಫ್ರಾಂಚೈಸಿಗಳು ಕಡ್ಡಾಯವಾಗಿ ಪಾಲಿಸುತ್ತಿವೆ. ಆದ್ರೂ ಕೆಲವೊಂದು ಬಾರಿ ಈ ರೀತಿಯ ಸುದ್ದಿಗಳನ್ನು ಕೇಳಿದಾಗ ಆಘಾತವಾಗುತ್ತದೆ. ಜೈವಿಕ್ ಸುರಕ್ಷತೆಯ ನಡುವೆಯೇ ಈ ಬಾರಿಯ ಐಪಿಎಲ್ ಟೂರ್ನಿ ಕೂಡ ನಡೆಯುತ್ತಿದೆ.
ಮುಂಬೈನಲ್ಲಿ ಏಪ್ರಿಲ್ 10ರಿಂದ ಏಪ್ರಿಲ್ 25ರವರೆಗೆ ಪಂದ್ಯಗಳು ನಡೆಯಲಿವೆ. ಏಪ್ರಿಲ್ 10ರಂದು ದೆಹಲಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಟ ನಡೆಸಲಿವೆ.
ಸದ್ಯ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಮತ್ತು ರಾಜಸ್ತಾನ ರಾಯಲ್ಸ್ ತಂಡಗಳು ಮುಂಬೈನಲ್ಲಿ ಬೀಡುಬಿಟ್ಟಿದ್ದು ಐಪಿಎಲ್ ಗಾಗಿ ತಯಾರಿ ಕೂಡ ನಡೆಸುತ್ತಿವೆ.