ಐಪಿಎಲ್ 2021- ಅಕ್ಷರ್ ಪಟೇಲ್ ಗೆ ಕೋವಿಡ್ ಸೋಂಕು ದೃಢ
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಲ್ ರೌಂಡರ್ ಅಕ್ಷರ್ ಪಟೇಲ್ ಅವರಿಗೆ ಕೋರೊನಾ ಸೋಂಕು ದೃಢಪಟ್ಟಿದೆ. ಇದು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮಾತ್ರವಲ್ಲ. ಐಪಿಎಲ್ ಟೂರ್ನಿಗೂ ಆಘಾತವನ್ನುಂಟು ಮಾಡಿದೆ.
ಈ ನಡುವೆ ಮುಂಬೈನ ವಾಂಖೇಡೆ ಮೈದಾನದ ಸಿಬ್ಬಂದಿಗೂ ಕೋವಿಡ್ ಸೋಂಕು ದೃಢಪಟ್ಟಿದೆ. ಇನ್ನೊಂದೆಡೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ಯಾಟ್ಸ್ ಮೆನ್ ನಿತೇಶ್ ರಾಣಾ ಅವರಿಗೆ ಮಾರ್ಚ್ 22ರ ಕೋವಿಡ್ ಟೆಸ್ಟ್ ನಲ್ಲಿ ಪಾಸಿಟಿವ್ ಬಂದಿತ್ತು. ಆದಾದ ನಂತರದ ಪರೀಕ್ಷೆಯಲ್ಲಿ ಕೋವಿಡ್ ನೆಗೆಟಿವ್ ಬಂದಿದೆ.
Axar Patel tests positive for COVID-19
ಸದ್ಯ ಅಕ್ಷರ್ ಪಟೇಲ್ ಅವರು ಐಸೊಲೇಷನ್ ನಲ್ಲಿದ್ದಾರೆ. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು ಹತ್ತು ದಿನಗಳ ಕಾಲ ಅಕ್ಷರ್ ಪಟೇಲ್ ಅವರು ಐಸೋಲೇಷನ್ ನಲ್ಲಿರಲಿದ್ದಾರೆ. ಪ್ರತಿ ದಿನ ಫ್ರಾಂಚೈಸಿಗಳ ವೈದ್ಯರ ತಂಡ ನಿಗಾ ವಹಿಸಲಿದ್ದಾರೆ.
ಸದ್ಯ ದೇಶದ್ಯಾಂತ ಕೋವಿಡ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದ್ರಲ್ಲೂ ಮಹಾರಾಷ್ಟ್ರದಲ್ಲಿ ಜಾಸ್ತಿನೇ ಆಗುತ್ತಿದೆ. ಈ ನಡುವೆ ಮುಂಬೈನ ಪಂದ್ಯಗಳನ್ನು ಹೈದ್ರಬಾದ್ ಗೆ ಶಿಫ್ಟ್ ಮಾಡುವ ಚಿಂತನೆಯೂ ನಡೆಯುತ್ತಿದೆ.
ಏಪ್ರಿಲ್ 9ರಿಂದ ಐಪಿಎಲ್ ಟೂರ್ನಿ ಆರಂಭವಾಗಲಿದೆ. ಚೆನ್ನೈನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಹಣಾಹಣಿ ನಡೆಸಲಿವೆ.
ಏಪ್ರಿಲ್ 10ರಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಕಾದಾಟ ನಡೆಯಲಿದೆ.
ಈ ನಡುವೆ ವಾಂಖೇಡೆಯ ಹತ್ತು ಮಂದಿ ಸಿಬ್ಬಂದಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಇದು ಸಹಜವಾಗಿ ಫ್ರಾಂಚೈಸಿಗಳಿಗೆ ಆತಂಕವನ್ನುಂಟು ಮಾಡಿದೆ. ಬಿಸಿಸಿಐ ಈಗಾಗಲೇ ಸಾಕಷ್ಟು ಮುನ್ನೆಚ್ಚೆರಿಕೆಯ ಕ್ರಮಗಳನ್ನು ತೆಗೆದುಕೊಂಡಿದೆ.
ಕಳೆದ 2020ರ ಐಪಿಎಲ್ ನ ಆರಂಭದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇಬ್ಬರು ಆಟಗಾರರು ಮತ್ತು ಟೀಮ್ ಮ್ಯಾನೇಜ್‍ಮೆಂಟ್ 11 ಸಿಬ್ಬಂದಿಗಳು ಕೋವಿಡ್ ಸೋಂಕುಗೆ ಒಳಗಾಗಿದ್ದರು.