ವಿಜಯೇಂದ್ರ ದೇವಲೋಕದಿಂದ ಇಳಿದು ಬಂದಿದ್ದಾನಾ : ಸಿದ್ದರಾಮಯ್ಯ ಗುಡುಗು
ಚನ್ನರಾಯಪಟ್ಟಣ : ಯಾರೀ ಚಾಣಕ್ಯ? ಅವನೇನು ದೇವಲೋಕದಿಂದ ಇಳಿದು ಬಂದಿದ್ದಾನಾ ಎಂದು ಸಿಎಂ ಪುತ್ರ ಬಿ ವೈ ರಾಘವೇಂದ್ರ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಖಾಸಗಿ ಕಾರ್ಯಕ್ರಮ ಮುಗಿಸಿಕೊಂಡು ಬಂದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ವಿಜಯೇಂದ್ರ ಬಗ್ಗೆ ಕೇಳಿದ ಪ್ರಶ್ನೆಗೆ ಕೆಂಡಾಮಂಡಲವಾದ ಸಿದ್ದರಾಮಯ್ಯ, ಯಾರೀ ಚಾಣಕ್ಯ? ಅವನೇನು ದೇವಲೋಕದಿಂದ ಇಳಿದು ಬಂದಿದ್ದಾನಾ.
8 ಬಾರಿ ಗೆದ್ದಿದ್ದೇವೆ ಹಾಗಿದ್ರೆ ನಾವ್ಯಾರು? ಒಂದೇ ಒಂದು ಚುನಾವಣೆಯಲ್ಲಿ ಗೆದ್ದಿದ್ದಾನಾ ಅವನು ಎಂದು ಏಕವಚನದಲ್ಲೇ ಸಖತ್ ಟಾಂಗ್ ನೀಡಿದರು.
ಚಾಣಕ್ಯ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ದುಡ್ಡು ಹಂಚುವುದರಲ್ಲಿ ವಿಜಯೇಂದ್ರ ಚಾಣಕ್ಯನೇ ಹೊರತು, ಬೇರೆ ಯಾವುದರಲ್ಲೂ ಅಲ್ಲ. ಅವರ ಅಪ್ಪ ಯಡಿಯೂರಪ್ಪ ಕೆಜೆಪಿ ಪಕ್ಷ ಮಾಡಿದಾಗ ವಿಜಯೇಂದ್ರ ಎಲ್ಲಿಗೆ ಹೋಗಿದ್ದ ಎಂದು ಪ್ರಶ್ನಿಸಿದರು.
ಇನ್ನು ಈಶ್ವರಪ್ಪ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ ಎಂದರೆ ಅದರಲ್ಲಿ ಗೊತ್ತಾಗುತ್ತೆ ಇಲ್ಲಿರೋದು ಯಡಿಯೂರಪ್ಪ ಮತ್ತು ಅವರ ಮಗನ ಸರ್ಕಾರ ಅಂತ.
ಒಂದೊಂದು ವೋಟಿಗೆ 5ರಿಂದ 6 ಸಾವಿರ ರೂ. ಕೊಟ್ಟು ಚುನಾವಣೆ ಗೆಲ್ಲಲು ಹೊರಟಿದ್ದಾರೆ. ದುಡ್ಡು ಹಂಚುವುದರಲ್ಲಿ ಮಾತ್ರ ವಿಜಯೇಂದ್ರ ಚಾಣಕ್ಯ ಎಂದು ಸಿದ್ದರಾಮಯ್ಯ ಕುಟುಕಿದರು.










