ಫೇಸ್ ಬುಕ್ ನಿಜವಾಗ್ಲೂ ಎಷ್ಟು ಸೇಫ್..?
ನ್ಯೂಯಾರ್ಕ್ : ಫೇಸ್ ಬುಕ್ ನಿಜವಾಗ್ಲೂ ಸುರಕ್ಷಿತವಾ..? ಎಂಬ ಪ್ರಶ್ನೆ ಕಳೆದ ಕೆಲ ವರ್ಷಗಳಿಂದ ಎಲ್ಲೆಡೆ ಕೇಳಿಬರುತ್ತಲೇ ಇದೆ. ಫೇಸ್ ಬುಕ್ ತನ್ನ ಬಳಕೆದಾರರ ಮಾಹಿತಿಯನ್ನ ಸೋರಿಕೆ ಮಾಡುತ್ತಿದೆ ಎಂದು ಆರೋಪ ಕೇಳಿಬರುತ್ತಲೇ ಇದೆ.
ಇದಕ್ಕೆ ಪುಷ್ಠಿ ನೀಡುವಂತೆ ಇದೀಗ ಅಂದಾಜು 106 ದೇಶಗಳ 500 ಮಿಲಿಯನ್‍ಗಿಂತಲೂ ಹೆಚ್ಚು ಫೇಸ್‍ಬುಕ್ ಬಳಕೆದಾರರ ವಿವರಗಳು ಆನ್‍ಲೈನ್ ವೆಬ್‍ಸೈಟ್‍ನಲ್ಲಿ ಸೋರಿಕೆಯಾಗಿರುವ ಬಗ್ಗೆ ಬ್ಯುಸಿನೆಸ್ ಇನ್ ಸೈಡರ್ ವರದಿ ಮಾಡಿದೆ.
ಬ್ಯುಸಿನೆಸ್ ಇನ್ ಸೈಡರ್ ವರದಿ ಪ್ರಕಾರ, ಅಂದಾಜು 106 ದೇಶಗಳ 500 ಮಿಲಿಯನ್‍ಗಿಂತಲೂ ಹೆಚ್ಚು ಫೇಸ್‍ಬುಕ್ ಬಳಕೆದಾರರ ವಿವರಗಳು ಆನ್‍ಲೈನ್ ವೆಬ್‍ಸೈಟ್‍ನಲ್ಲಿ ಸೋರಿಕೆಯಾಗಿದೆ.
ಈ ಮಾಹಿತಿ ಹಳೆಯದು ಎಂಬ ವಾದವೂ ಎದ್ದಿದ್ದು, ಸೋರಿಕೆಯಾಗಿರುವ ಕೆಲವು ದತ್ತಾಂಶಗಳು ಈಗಲೂ ಪ್ರಸ್ತುತವೆಂದು ಹೇಳಲಾಗಿದೆ.
ಸದ್ಯ ಸೋರಿಕೆಯಾಗಿದೆ ಎನ್ನಲಾಗುತ್ತಿರುವ ಹಲವು ದೂರವಾಣಿ ಸಂಖ್ಯೆಗಳು, ಲೊಕೇಶನ್, ಫೇಸ್‍ಬುಕ್ ಖಾತೆ ಹೊಂದಿರುವವರು ಈಗಲೂ ಫೇಸ್ ಬುಕ್ ನಲ್ಲಿ ಸಕ್ರಿಯರಾಗಿದ್ದಾರೆ. ಆದರೆ, ಈ ವರದಿ ಹಳೆಯದ್ದು ಎಂದು ಫೇಸ್‍ಬುಕ್ ಪ್ರತಿಕ್ರಿಯಿಸಿದೆ.
ಇನ್ನು ಈ ವಿಚಾರವಾಗಿ ಮಾತನಾಡಿರುವ ಸೈಬರ್ ಕ್ರೈಂ ತಜ್ಞರು, ಇಮೇಲ್ ವಿಳಾಸ, ದೂರವಾಣಿ ಸಂಖ್ಯೆ ಸೇರಿದಂತೆ 500 ಮಿಲಿಯನ್‍ಗಿಂತಲೂ ಹೆಚ್ಚು ಫೇಸ್‍ಬುಕ್ ಬಳಕೆದಾರರ ವಿವರವನ್ನು 2019ರಲ್ಲಿ ಆನ್‍ಲೈನ್ ವೇದಿಕೆಯಲ್ಲಿ ಸೋರಿಕೆ ಮಾಡಲಾಗಿತ್ತು ಎಂದಿದ್ದಾರೆ.
ಇತ್ತ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆಗಳು ಆರಂಭವಾಗಿದ್ದು, ಹಳೆಯ ಮಾಹಿತಿ ಸೋರಿಕೆಯಾಗಿದೇ ಅಂದ್ರೆ ಹೊಸ ಮಾಹಿತಿ ಸೋರಿಕೆ ಆಗುವುದಿಲ್ಲ ಎಂಬ ಗ್ಯಾರಂಟಿ ಏನಿದೆ..? ಫೇಸ್ ಬುಕ್ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಎನ್ನುತ್ತಿದ್ದಾರೆ.










