mumbai ನಾಣ್ಯಗಳ ರೂಪದಲ್ಲಿ ಸಾರಿಗೆ ನೌಕರರಿಗೆ ಸಂಬಳ
ಮುಂಬೈ : ವಾಣಿಜ್ಯ ನಗರಿಯಲ್ಲಿ ಕಳೆದ ಕೆಲ ತಿಂಗಳಿನಿಂದ ಎಲೆಕ್ಟ್ರಿಕ್ ಸಪ್ಲೈ ಅಂಡ್ ಟ್ರಾನ್ಸ್ ಪೋರ್ಟ್ ಅಂಡರ್ ಟೇಕಿಂಗ್ ಸಿಬ್ಬಂದಿಗೆ ನಾಣ್ಯಗಳಲ್ಲಿ ಸಂಬಳ ನೀಡಲಾಗುತ್ತಿದೆ.
ಮುಂಬೈನಲ್ಲಿ ನಾಣ್ಯಗಳ ರೂಪದಲ್ಲಿ ಬೃಹತ್ ಪ್ರಮಾಣದಲ್ಲಿ ಟಿಕೆಟ್ ಹಣ ಸಂಗ್ರಹವಾಗುತ್ತಿದೆ. ಈ ಕಾರಣಕ್ಕಾಗಿ ಸಾರಿಗೆ ಸಂಸ್ಥೆ ನಗರದ ಖಾಸಗಿ ಬ್ಯಾಂಕ್ ಗೆ ನ್ಯಾಣಗಳನ್ನ ನೀಡಿ ಹಣ ಪಡೆಯುತ್ತಿತ್ತು.
ಆದ್ರೆ ಇತ್ತೀಚೆಗೆ ಸಾರಿಗೆ ಸಂಸ್ಥೆ ಬ್ಯಾಂಕ್ ನೊಂದಿಗೆ ಮಾಡಿಕೊಂಡಿದ್ದ ಒಪ್ಪಂದದ ಅವಧಿ ಮುಕ್ತಾಯವಾಗಿದ್ದು, ಈ ಹಿನ್ನೆಲೆ ಸುಮಾರು 40 ಸಾವಿರ ಸಿಬ್ಬಂದಿಯ ವೇತನದ ಬಹುಭಾಗವನ್ನು ನಾಣ್ಯಗಳ ರೂಪದಲ್ಲಿ ನೀಡಲಾಗುತ್ತಿದೆ.
10 – 15 ಸಾವಿರ ಸಂಬಳವನ್ನ 2, 5, 10 ರೂಪಾಯಿ ಮುಖಬೆಲೆಯ ನಾಣ್ಯಗಳೊಂದಿಗೆ ಕೊಡುತ್ತಿರುವುದು ಮುಂಬೈ ಬಸ್ ಆಪರೇಟರ್, ನೌಕರರು ಅಸಮಾಧಾನಕ್ಕೆ ಕಾರಣವಾಗಿದೆ.