ಪಬ್ ಜೀ ಆಟದಲ್ಲಿ ಸೋತ ವಿಚಾರಕ್ಕೆ ಗಲಾಟೆ ಬಾಲಕನನ್ನ ಕೊಲೆ ಮಾಡಿದ ಅಪ್ರಾಪ್ತ..!
ಮಂಗಳೂರು: 12 ವರ್ಷದ ಬಾಲಕನೊಬ್ಬ ಪಬ್ ಜೀ ಆಟ ಆಡಲು ಸ್ನೇಹಿತರೊಂದಿಗೆ ಮನೆಯಿಂದ ಹೊರ ಹೋಗಿದ್ದ. ಆದ್ರೆ ಮೈದಾನದಲ್ಲಿಯೇ ಬರ್ಬರವಾಗಿ ಹತ್ಯೆಯಾಗಿದ್ದಾನೆ. ಇಂತಹದೊಂದು ಆಘಾತಕಾರಿ ಘಟನೆ ಮಂಗಳೂರು ಹೊರವಲಯದ ಕೆಸಿ ರಸ್ತೆ ಬಳಿ ನಡೆದಿದೆ. ಈ ಸಂಬಂಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ ನಂತರ ಆರೋಪಿಯನ್ನ ಪತ್ತೆ ಹಚ್ಚಿ ವಿಚಾರಣೆ ನಡೆಸಿದ್ದಾರೆ. ಇದಾದ ನಂತರ 17 ವರ್ಷದ ಅಪ್ರಾಪ್ತ ಆರೋಪಿ ತಾನೇ ಕೊಲೆ ಮಾಡಿದ್ದು, ಯಾತಕ್ಕಾಗಿ ಮಾಡಿದ್ದು ಎಂಬ ಆಘಾತಕಾರಿ ಸತ್ಯ ಬಾಯ್ಬಿಟ್ಟಿದ್ದಾನೆ. ಕೆಲ ತಿಂಗಳಿಂದ ಆಕೀಫ್ ಮತ್ತು ಈತನ ಸ್ನೇಹಿತ ದೀಪಕ್ ಇಬ್ಬರೂ ಒಟ್ಟಿಗೆ ಕೂತು ಪಬ್ಜಿ ಆಡುತ್ತಿದ್ದರು. ಆಟದಲ್ಲಿ ಪ್ರತಿ ಬಾರಿಯೂ ಆಕೀಫ್ ಗೆಲ್ಲುತ್ತಿದ್ದ. ಅದರಂತೆ ನಿನ್ನೆ ಸಂಜೆಯೂ ಆಟವಾಡಲು ಆಕೀಫ್ ಮನೆ ಸಮೀಪದ ಗ್ರೌಂಡ್ಗೆ ಹೋಗಿದ್ದ. ಆದರೆ ಆಗ ಆಕೀಫ್ ಸೋತಿದ್ದ.
ಆಟದಲ್ಲಿ ಮೋಸವಾಗುತ್ತಿದೆ ಎಂದು ಆಕೀಫ್ ದೂರಿದ್ದಾನೆ. ಇದೇ ವಿಚಾರವಾಗಿ ದೀಪಕ್ , ಆಕೀಫ್ ನಡುವೆ ದೊಡ್ಡ ಗಲಾಟೆ ನಡೆದಿದೆ. ಪರಸ್ಪರ ಕಲ್ಲಿನಿಂದ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಆಕೀಫ್ ಮೇಲೆ ದೀಪಕ್ ದೊಡ್ಡ ಕಲ್ಲು ಎತ್ತಿ ಹಾಕಿದ್ದಾನೆ. ತೀವ್ರವಾಗಿ ಗಾಯಗೊಂಡ ಆಕೀಫ್ ಸ್ಥಳದಲ್ಲೇ ಸಾವನಪ್ಪಿದ್ದಾನೆ. ಈ ವೇಳೆ ದೀಪಕ್ ಗಾಬರಿಯಿಂದ ಆಕೀಫ್ ನ ಮೃತದೇಹವನ್ನ ಮೈದಾನದ ಬದಿಯಲ್ಲಿ ಎಸೆದು ಪರಾರಿಯಾಗಿದ್ದಾನೆ. ಇತ್ತ ಮಗ ನಾಪತ್ತೆಯಾಗ್ತಿದ್ದಂತೆ ಗಾಬರಿಗೊಂಡ ಪೋಷಕರು ಎಷ್ಟೇ ಹುಡುಕಾಡಿದ್ರು ಆತ ಸಿಕ್ಕಿರಲಿಲ್ಲ. ಹೀಗಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಉಳ್ಲಾಲ ಪೊಲೀಸರು ಬಳಿಕ ತನಿಖೆ ನಡೆಸಿದಾಗ ದೀಪಕ್ ಸಿಕ್ಕಿಬಿದ್ದಿದ್ದಾನೆ.
16 ವರ್ಷದ ಬಾಲಕನಿಂದ ನಿರಂತರ ಲೈಂಗಿಕ ಕಿರುಕುಳ – ಬೆಂಕಿ ಹಚ್ಚಿಕೊಂಡಿದ್ದ 15 ವರ್ಷದ ಬಾಲಕಿ ಸಾವು..!







