ಜಿ.ಪರಮೇಶ್ವರ್ ಸಿಎಂ ಆಗಲಿ : ಕೆ.ಎನ್.ರಾಜಣ್ಣ
ತುಮಕೂರು : ಕಾಂಗ್ರೆಸ್ ನಲ್ಲಿ ಸಿಎಂ ಅಭ್ಯರ್ಥಿ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ಯೋಚಿಸದ ಕಾಂಗ್ರೆಸ್ ನಾಯಕರು ಮುಖ್ಯುಮಂತ್ರಿ ಅಭ್ಯರ್ಥಿ ಬಗ್ಗೆಯೇ ಮಾತುಗಳು..!
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜಿ ಪರಮೇಶ್ವರ್ ಅವರನ್ನ ಸಿಎಂ ಮಾಡಬೇಕು ಎಂಬ ಕೂಗು ಎದ್ದಿತ್ತು. 2018ರ ಚುನಾವಣೆ ಸಂದರ್ಭದಲ್ಲೂ ಪರಮೇಶ್ವರ್ ಸಿಎಂ ಎಂದು ಕೆಲವರು ಹೇಳಿಕೆ ನೀಡಿದ್ದರು.
ಇದೀಗ ಡಿ.ಕೆ ಶಿವಕುಮಾರ್ ಹೆಸರು ಕೇಳಿಬಂದಿತ್ತು. ಆದ್ರೆ ಈಗ ಕಾಂಗ್ರೆಸ್ ಸಿಎಂ ರೇಸ್ ನಲ್ಲಿ ಮತ್ತೆ ಪರಮೇಶ್ವರ್ ಹೆಸರು ಕೇಳಿಬಂದಿದೆ.
ಕೊರಟಗೆರೆ ತಾಲೂಕಿನ ದೊಡ್ಡಸಾಗ್ಗೆರೆಯಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾತನಾಡುತ್ತಾ, ಪರಮೇಶ್ವರ್ ಅವರನ್ನ ಕೈ ಬಿಡಬೇಡಿ,ಈ ಬಾರಿ ಸಿಎಂ ಆಗಲಿ ಎಂದು ಹೇಳಿಕೆ ನೀಡಿದರು.
ಮುಂದುವರಿದು ಮಾತನಾಡಿ ಪರಮೇಶ್ವರ್, ನಿಮ್ಮಿಂದ ನಾನು ನಿರೀಕ್ಷೆ ಮಾಡೋದು ಪರಮೇಶ್ವರ್ ಗೆ ಮತ. ಅವ್ರು ಮಂತ್ರಿ ಆಗಿದ್ದಾರೆ.
ಡಿಸಿಎಂ ಆಗಿದ್ದಾರೆ ಇನ್ನೊಂದು ಸರಿಗೆ ಡೆಪ್ಯೂಟಿ ಅನ್ನೋದನ್ನ ಕಳೆದು ಬಿಡಿ.
ಹಾಗಂತ ಕೆ.ಎನ್.ರಾಜಣ್ಣ ಸಿದ್ದರಾಮಯ್ಯ ಬಿಟ್ಟವರೆ, ಶಿವಕುಮಾರ್ ಬಿಟ್ಟವರೆ ಅಂತಲ್ಲ. ನಮ್ಮ ಜಿಲ್ಲೆಯವರು ಸಿಎಂ ಆದ್ರೆ ನಮ್ಮ ಜಿಲ್ಲೆ ಅಭಿವೃದ್ಧಿ ಆಗುತ್ತೆ ಅಂತಾ ಎಂದು ಹೇಳಿದ್ದಾರೆ.