=ಕೋಲಾರದಲ್ಲಿ ಕೊರೊನಾ ವೈರಸ್ ನ ಬಿಸಿ ಹೆಚ್ಚಾಗಿ ರೈತ ಸಮುದಾಯಕ್ಕೆ ತಗುಲಿದೆ.ಒಂದೂ ಕಡೆಯಲ್ಲಿ ರೈತರು ತಾವು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೇ ದಿಕ್ಕು ತೋಚದಂತ್ತ ಪರಿಸ್ಥಿಗೆ ತಲುಪಿದ್ದು ಆತಂಕಕ್ಕೆ ಒಳಗಾಗಿದ್ದಾರೆ. ಇದರ ನಡುವೆ ಏಷಿಯಾದಲ್ಲೇ ೨ ನೇ ಅತೀ ದೊಡ್ಡ ಟಮೋಟೊ ಮಾರುಕಟ್ಟೆಯಲ್ಲಿ ಕೆಲಸ ಮಾಡ್ತಿರೋ ತರಕಾರಿ ಮಂಡಿ ಮಾಲೀಕರ ಪರಿಸ್ಥಿತಿ ಹೇಳತೀರದಂತ್ತಾಗಿದೆ.ರೈತರಿಂದ ಖರೀದಿಸಿದ ತರಕಾರಿಗಳನ್ನು ಹೊರ ರಾಜ್ಯಕ್ಕೆ ರಫ್ತು ಮಾಡಲಾಗದೇ ತಮ್ಮ ಅಂಗಡಿಗಳಲ್ಲೆ ಸ್ಟಾಕ್ ಮಾಡಿಕೊಂಡು ಕೈಸುಟ್ಟುಕೊಂಡು ಮಾಲೀಕರು ನಮಗೆ ತರಕಾರಿನೇ ಬೇಡ ಇರೋದನ್ನೆ ಮಾರಾಟ ಮಾಡೋದಕ್ಕೆ ಆಗ್ತಿಲ್ಲ ಅಂತ ರೈತರಿಂದ ತರಕಾರಿ ಖರೀದಿಸಲು ಹಿಂದೇಟು ಹಾಕ್ತಿದ್ದಾರೆ..ಇದನ್ನೆಲ್ಲಾ ಅರಿತ ಕೋಲಾರ ಜಿಲ್ಲೆಯ ಸಂಸದ ಎಸ್.ಮುನಿಸ್ವಾಮಿ ತಾವೇ ನೇರವಾಗಿ ರೈತರ ತೊಟಗಳಿಗೆ ಭೇಟಿ ಕೊಟ್ಟು ರೈತರಿಗೆ ಸರಿದೂಗವ ಹಣವನ್ನು ನೀಡಿ ಈಗಾಗಲೇ ಉಚಿತವಾಗಿ ಹಂಚುತಿರುವ ದಿನಸಿ ಸಾಮಾಗ್ರಿಗಳ ಜೊತೆಯಲ್ಲಿ ತರಕಾರಿಗಳನ್ನು ಸಹ ಹಂಚಿಕೆ ಮಾಡ್ತಿದ್ದಾರೆ. ಇನ್ನು ಇದರ ಜೊತೆ ಜೊತೆಯಲ್ಲಿ ಇವತ್ತು ಬೆಳ್ಳಿಗೆ ಎಪಿಎಂಸಿ ಮಾರುಕಟ್ಟೆಗೆ ಭೇಟಿ ಕೊಟ್ಟ ಸಂಸದ ಮುನಿಸ್ವಾಮಿ ತಮ್ಮ ಸ್ವಂತ ಖಚಿ೯ನಲ್ಲಿ ಮಂಡಿ ಮಾಲೀಕರ ಬಳಿ ಅವಶ್ಯಕವಿರುವ ತರಕಾರಿಯನ್ನು ಖರೀದಿಸಿದ್ದಾರೆ.೧೬೦೦ ಕೆಜಿ ಕ್ಯಾಪ್ಸಿಕಂ,೫೦೦೦ ಕೆಜಿ ಕ್ಯಾರೆಟ್,೮೦೦೦ ಕೆಜಿ ಯಷ್ಟು ಹೂಕೋಸು ಹಾಗೂ ಎಲೆಕೋಸು,೧೬೦೦ ಕೆಜಿ ಹೀರೆಕಾಯಿ ಹಾಗೂ ಇನ್ನಿತರ ತರಕಾರಿಗಳನ್ನು ಖರೀದಿಸಿ ಕೋಲಾರ ಜಿಲ್ಲೆಯಾದ್ಯಾಂತ ವಿತರಣೆ ಮಾಡುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ…








