ಜಗತ್ತಿನಾದ್ಯಂತ ಕೊರೊನಾ ಸಾವಿನ ಸಂಖ್ಯೆ ಹೆಚ್ಚಳ : ಮುಂದೆ ಕಾದಿದ್ಯಾ ಮಾರಿಹಬ್ಬ..?
ಬೆಂಗಳೂರು : ಕೊರೊನಾ ಬಗ್ಗೆ ನಿರ್ಲಕ್ಷ್ಯ ಬೇಡ.. ಕೊರೊನಾ ಎರಡನೇ ಅಲೆ ಮೊದಲಿಗಿಂತಲೂ ಡೇಂಜರ್.. ಹೌದು..! ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಕಳೆದ ವರ್ಷದಲ್ಲಿ ನಮ್ಮನ್ನೆಲ್ಲಾ ಕಾಡಿದ್ದ ಕೊರೊನಾಗಿಂತಲೂ ಈ ಕೊರೊನಾ 2.0 ರಾಕೇಟ್ ವೇಗದಲ್ಲಿ ಜನರ ದೇಹ ಹೊಕ್ಕುತ್ತಿದೆ.
ವಿಶ್ವದಾದ್ಯಂತ ಕೊರೊನಾ ಪ್ರಕರಣಗಳು ಮತ್ತು ಕೊರೊನಾಗೆ ಬಲಿಯಾಗುತ್ತಿರುವವ ಸಂಖ್ಯೆ ಹೆಚ್ಚಾಗಿದೆ.
ಬ್ರಿಜಿಲ್ ನಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್ ಗುರುವಾರ ಒಂದೇ ದಿನ ಬರೋಬ್ಬರಿ 4000ಕ್ಕೂ ಹೆಚ್ಚು ಸೋಂಕಿತರನ್ನ ಬಲಿಪಡೆದುಕೊಂಡಿದೆ.
ಅಮೆರಿಕ ಹಾಗೂ ಪೆರುವಿನಲ್ಲಿಯೂ ಈ ವಾರ ದಿನವೊಂದರಲ್ಲಿ ನಾಲ್ಕು ಸಾವಿರಕ್ಕೂ ಹಚ್ಚುಮಂದಿ ಕೊರೊನಾದಿಂದ ಕೊನೆಯುಸಿಳೆರೆದಿದ್ದಾರೆ.
ಹೊಸ ಪ್ರಕರಣಗಳು
ಕೊರೊನಾ ಎರಡನೇ ಅಲೆ ಭಾರತದಲ್ಲಿ ಲಂಗುಲಗಾಮಿಲ್ಲದೇ ಸಾಗುತ್ತಿದ್ದು, ಪ್ರತಿ ದಿನ ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದೇಶದಲ್ಲಿ ವರದಿಯಾಗುತ್ತಿವೆ.
ಜೊತೆಗೆ ಸಾವಿನ ಸಂಖ್ಯೆಯಲ್ಲೂ ಏರಿಕೆ ಕಾಣುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇನ್ನು ಅಮೆರಿಕದ ಮಿಷಿಗನ್‍ನಲ್ಲಿ ಒಂದೇ ದಿನ 7,000 ಪ್ರಕರಣಗಳು ದೃಢಪಟ್ಟಿವೆ.
ಇರಾನ್‍ನಲ್ಲಿ 22,600 ಹೊಸ ಪ್ರಕರಣಗಳು ವರದಿಯಾಗಿವೆ. ದಕ್ಷಿಣ ಕೊರಿಯಾದಲ್ಲಿ 700 ಹೊಸ ಪ್ರಕರಣಗಳು ವರದಿಯಾಗಿದ್ದು, ಜನವರಿ 5ರ ಬಳಿಕದ ಗರಿಷ್ಠ ಪ್ರಕರಣಗಳಾಗಿವೆ.
ಸದ್ಯದ ಈ ಟ್ರೆಂಡ್ ನೋಡಿದ್ರೆ ಮುಂದಿನ ದಿನಗಳಲ್ಲಿ ಕೊರೊನಾ ಅಬ್ಬರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಅನ್ನೋದರಲ್ಲಿ ಸಂಶಯವೇನು ಇಲ್ಲ. ಆದ್ದರಿಂದ ಯಾರನ್ನು ನೆಚ್ಚಿಕೊಳ್ಳದೇ ನಮ್ಮ ಜಾಗ್ರತೆಯಲ್ಲಿ ನಾವಿರುವುದು ಒಳ್ಳೆಯದು.