ಇಂದಿನಿಂದ ರಾಜ್ಯದಲ್ಲಿ ನೈಟ್ ಕಫ್ರ್ಯೂ ಜಾರಿ ಏನಿರುತ್ತೆ…? ಏನಿರಲ್ಲ..?
ಬೆಂಗಳೂರು : ದೇಶ ಹಾಗೂ ರಾಜ್ಯದಲ್ಲಿ ಕೋವಿಡ್ 2ನೇ ಅಲೆ ಜೋರಾಗಿ ಬೀಸಿದ್ದು, ಮಹಾಮಾರಿ ತಡೆಗೆ ಸರ್ಕಾರ ನಾನಾ ಕ್ರಮಗಳನ್ನ ತೆಗೆದುಕೊಳ್ತಾಯಿದೆ. ಈ ನಡುವೆ ದೆಹಲಿ, ಮಹಾರಾಷ್ಟ್ರ, ಛತ್ತೀಸ್ ಗಢ ಹಾಗೂ ಇನ್ನೂ ಕೆಲ ರಾಜ್ಯಗಳ ಮಾದರಿಯಲ್ಲೇ ಕರ್ನಾಟಕ
ಸರ್ಕಾರವೂ ಕೂಡ ನೈಟ್ ಕಫ್ರ್ಯೂ ಹೇರಿದೆ. ಇಂದಿನಿಂದಲೇ ನೈಟ್ ಕಫ್ರ್ಯೂ ಆದೇಶವಿದ್ದು,
ನಾಳೆಯಿಂದ ಅಂದರೆ ಏಪ್ರಿಲ್ 10ರಿಂದ ಏಪ್ರಿಲ್ 20ರವರೆಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಬಳ್ಳಾರಿ, ಕಲಬುರಗಿ, ತುಮಕೂರು, ಕಲಬುರಗಿ ಜಿಲ್ಲೆಗಳಲ್ಲಿ ನಗರಕ್ಕೆ ಮಾತ್ರ ಸೀಮಿತವಾಗುತವಂತೆ ಇದು ಜಾರಿಯಾಗಲಿದೆ.
ಒಂದು ವೇಳೆ ಈ ಅವಧಿಯಲ್ಲಿಯೂ ಕರೊನಾ ನಿಯಂತ್ರಣಕ್ಕೆ ಬಾರದೇ ಹೋದರೆ, ಜನರು ಸಹಕರಿಸದೇ ಹೋದರೆ ಲಾಕ್ಡೌನ್ ಆದರೂ ಅಚ್ಚರಿಯಿಲ್ಲ. ಸದ್ಯ ನೈಟ್ ಕರ್ಫ್ಯೂಗೆ ಸಂಬಂಧಿಸಿದಂತೆ ಕೆಲವೊಂದು ನಿಯಮಗಳನ್ನು ಸರ್ಕಾರ ವಿಧಿಸಿದೆ.
ಒಟ್ಟು 10 ದಿನಗಳ ಕಾಲ ಈ ರಾತ್ರಿ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ಈ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಕ್ರಮಗಳು, ಔತಣಕೂಟಗಳು, ಹಾರ್ಡ್ವೇರ್, ಮಾಲ್ಗಳು, ಮಾರುಕಟ್ಟೆ, ಬಸ್ ನಿಲ್ದಾಣ, ಬಾರ್ ಅಂಡ್ ರೆಸ್ಟೋರೆಂಟ್, ಡಿಸ್ಕೊಥೆಕ್, ಪಬ್, ಕ್ಲಬ್ಗಳು, ಗಾರ್ಮೆಂಟ್ಸ್, ಕೈಗಾರಿಕೆಗಳು, ಹೋಟೆಲ್ಗಳು, ಸಭೆ-ಸಮಾರಂಭ, ಜನನಿಬಿಡ ಪ್ರದೇಶಗಳು ಸಂಪೂರ್ಣ ಮುಚ್ಚಬೇಕಿದೆ. ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಕಾರ್ಖಾನೆಗಳು, ಕಂಪೆನಿಗಳು, ಸಂಸ್ಥೆಗಳು ಯಥಾರೀತಿ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ. ಆದರೆ, ಸಂಬಂಧಿಸಿದ ಕಾರ್ಮಿಕರು, ನೌಕರರು ಕರೊನಾ ಕರ್ಫ್ಯೂ ಅವಧಿಗೆ ಮುನ್ನವೇ ಕರ್ತವ್ಯದಲ್ಲಿ ಹಾಜರು ಇರಬೇಕು ಎಂದು ಸರ್ಕಾರ ಹೇಳಿದೆ.