5 ವರ್ಷದ ಬಾಲಕಿ ಮೇಲೆ 10, 12 ವರ್ಷದ ಬಾಲಕರಿಂದ ಸಾಮೂಹಿಕ ಅತ್ಯಾಚಾರ..!
ಬಿಹಾರ : 5 ವರ್ಷದ ಬಾಲಕಿ ಮೇಲೆ 10 ಮತ್ತು 12 ವರ್ಷ ವಯಸ್ಸಿನ ಇಬ್ಬರು ಅಪ್ರಾಪ್ತರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಇಂತಹ ಘಟನೆ ಬಿಹಾರದ ಸಿವಾನ್ ನಲ್ಲಿ ನಡೆದಿದೆ. ಘಟನೆ ನಡೆದ ನಂತರ ಬಾಲಕಿ ಅಳುತ್ತಿದ್ದು, ಅವಳ ಬಟ್ಟೆಯಲ್ಲಿ ರಕ್ತದ ಕಲೆ ಕಂಡುಬಂದ ಹಿನ್ನಲೆಯಲ್ಲಿ ಪೋಷಕರು ವಿಚಾರಿಸಿದಾಗ ಆಕೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಬಳಿಕ ಸಂತ್ರಸ್ತೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ನೀಡಿರುವ ವಿಚಾರ ಗೊತ್ತಾಗ್ತಿದ್ದಂತೆ ಬಾಲಕರಿಬ್ಬರೂ ಸಹ ಪರಾರಿಯಾಗಿದ್ದರು.
ಆರೋಪಿ ಕುಟುಂಬಸ್ಥರು ಸಹ ಎಸ್ಕೇಪ್ ಆಗುವ ತಯಾರಿ ನಡೆಸಿದ್ದರು ಎನ್ನಲಾಗಿದೆ. ತಕ್ಷಣ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ. ಅಷ್ಟರೊಳಗೆ ಆರೋಪಿ ಹುಡುಗರನ್ನು ಅವರ ಮನೆಯವರು ಬೇರೆಕಡೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಪೊಲೀಸರು ಮನೆಯವರಿಗೆ ಹುಡುಗರನ್ನು ಕರೆದುಕೊಂಡು ಬಂದು ಒಪ್ಪಿಸುವಂತೆ ತಿಳಿಸಿದ್ದರು. ಅದರಲ್ಲಿ ಒಬ್ಬ ಹುಡುಗ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದು, ಆತನನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಮತ್ತೊಬ್ಬನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.








