Lockdown ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್ ಡೌನ್ : ಉದ್ಧವ್ ಸುಳಿವು
ಮುಂಬೈ : ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್ ಡೌನ್ ಆಗುವ ಸಾಧ್ಯತೆ ಇದೆ.
ಈ ಕುರಿತು ಸಿಎಂ ಉದ್ಧವ್ ಠಾಕ್ರೆ ಸುಳಿವು ನೀಡಿದ್ದು, 8 ರಿಂದ 15 ದಿನಗಳ ಕಾಲ ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ಮಾಡುವ ಬಗ್ಗೆ ಮಾತನಾಡಿದ್ದಾರೆ.
ಸರ್ವಪಕ್ಷಗಳ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಒಂದು ವೇಳೆ ಇವತ್ತು ಲಾಕ್ ಡೌನ್ ಮಾಡದೇ ಹೋದರೆ ನಾಳೆ ಲಾಕ್ ಡೌನ್ ಮಾಡುವ ಪರಿಸ್ಥಿತಿ ಬರುತ್ತದೆ.
ಲಾಕ್ ಡೌನ್ ಬದಲಾಗಿ ನಮ್ಮ ಮುಂದೆ ಬೇರೆ ಆಯ್ಕೆಗಳಿಲ್ಲ. ಕೊರೊನಾ ಚೈನ್ ಬ್ರೇಕ್ ಮಾಡೋದು ಅವಶ್ಯಕ ಎಂದಿದ್ದಾರೆ.
ಇನ್ನು ಲಸಿಕೆ ಪಡೆದವರಲ್ಲಿಯೂ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತೀರೋದು ಆತಂಕಕ್ಕೆ ಕಾರಣವಾಗಿದೆ.
ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಕೆಲ ನಿರ್ಣಯಗಳನ್ನ ತೆಗೆದುಕೊಳ್ಳುವುದು ಅನಿವಾರ್ಯ.
ಎಲ್ಲರೂ ರಸ್ತೆಗಿಳಿಯುತ್ತಿದ್ದರೆ, ಕೊರೊನಾ ನಿಯಂತ್ರಣ ಹೇಗೆ ಸಾಧ್ಯ. ಎರಡ್ಮೂರು ದಿನಗಳಲ್ಲಿ ಮತ್ತೊಮ್ಮೆ ಸಮೀಕ್ಷೆ ನಡೆಯಲಿದೆ ಎಂದರು.










