ಬೆಂಗಳೂರಲ್ಲಿ ಲಾಕ್ ಡೌನ್ ಮಾಡಲೇಬೇಕು : ತಾಂತ್ರಿಕ ಸಲಹಾ ಸಮಿತಿ
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಗೆ ಕಡಿವಾಣ ಹಾಕಬೇಕಿದ್ದರೇ ಸೋಂಕಿನ ಸರಪಳಿ ತುಂಡರಿಸಬೇಕು.
ಅದಕ್ಕಾಗಿ ಬೆಂಗಳೂರಿನಲ್ಲಿ ಕನಿಷ್ಠ 10 ದಿನಗಳವರೆಗೆ ಲಾಕ್ ಡೌನ್ ಮಾಡಬೇಕು ಎಂದು ತಾಂತ್ರಿಕ ಸಲಹಾ ಸಮಿತಿ ತಿಳಿಸಿದೆ.
ಇಂದು ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಡಾ.ಕೆ.ಸುಧಾಕರ್, ತಾಂತ್ರಿಕ ಸಲಹಾ ಸಮಿತಿ ಜೊತೆಗೆ ತುರ್ತು ಸಭೆ ನಡೆಸಿದರು.
ಈ ವೇಳೆ ಸಲಹಾ ಸಮಿತಿ, ಸೋಂಕಿನ ಸರಪಳಿ ತುಂಡರಿಸಲು ಬೆಂಗಳೂರು ಮಹಾ ನಗರದಲ್ಲಿ ಕನಿಷ್ಠ 10 ದಿನಗಳವರೆಗೆ ಲಾಕ್ ಡೌನ್ ಜಾರಿಗೊಳಿಸುವುದು ಸೂಕ್ತ ಎಂದಿದೆ.
ಅಲ್ಲದೆ, ಸದ್ಯಕ್ಕೆ 8 ನಗರಗಳಲ್ಲಿ ಜಾರಿಗೊಳಿಸಿರುವ ರಾತ್ರಿ ಕರೊನಾ ಕಫ್ರ್ಯೂ ಏಪ್ರಿಲ್ ಅಂತ್ಯದವರೆಗೆ ವಿಸ್ತರಿಸಬೇಕೆಂಬ ಸಲಹೆ ನೀಡಿದೆ.
ಆದ್ರೆ ಇದಕ್ಕೆ ಆರೋಗ್ಯ ಸಚಿವ ಸುಧಾಕರ್, ನೋ ಎಂದಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಲಾಕ್ ಡೌನ್ ಮಾಡಲೂ ಸರ್ಕಾರಕ್ಕೆ ಸಾಧ್ಯವಾಗದು ಎಂಬುದನ್ನು ಸಮಿತಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.










