ನಿದ್ದೆಗೆ ಜಾರಿದ್ದ ಪತಿಯ ಕೈಕಾಲು ಕಟ್ಟಿ ಕೊಲೆ ಮಾಡಿದ ಹೆಂಡತಿ …!
ಬೆಂಗಳೂರು : ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬಳು ತನ್ನ ಪತಿ ನಿದ್ದೆ ಮಾಡುತ್ತಿದ್ದ ವೇಳೆ ಕೈ ಕಾಲು ಕಟ್ಟಿ ಹಾಕಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಜೆಜೆ ನಗರದ ಓಬಳೇಶ್ ಕಾಲೋನಿಯಲ್ಲಿ ನಡೆದಿದೆ.
ಮೊಹನ್ (41) ಮೃತದುರ್ದೈವಿಯಾಗಿದ್ದು, ಪತ್ನಿ ಪದ್ಮಾವತಿ ಕೊಲೆ ಆರೋಪಿಯಾಗಿದ್ದಾಳೆ. ಕ್ಲುಲ್ಲಕ ಕಾರಣಕ್ಕೆ ಪತಿ- ಹಾಗೂ ಪತ್ನಿ ನಡುವೆ ಜಗಳ ನಡೆದಿದೆ. ಇದೇ ಸಿಟ್ಟಿನಿಂದ ಪದ್ಮಾವತಿ, ಪತಿ ಮಲಗಿದ್ದ ವೇಳೆ ಆತನ ಕೈ-ಕಾಲುಗಳನ್ನು ಕಟ್ಟಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ.
ಅರೋಪಿ ಪದ್ಮಾವತಿ ವಿರುದ್ಧ ಜೆ.ಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಜೆ.ಜೆ ನಗರ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ.
ಸೆಲ್ಫಿ ಕ್ರೇಜ್ ಗೆ ಬಿದ್ದು ಜಲಸಮಾಧಿಯಾದ ಪ್ರೇಮಿಗಳು..!








