ಕುರಾನ್ ನಿಂದ ಪದ್ಯಗಳನ್ನು ತೆಗೆಯಲ್ಲು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ದಂಡ ವಿಧಿಸಿದ ‘ಸುಪ್ರೀಂ’
ನವದೆಹಲಿ : ಇಸ್ಲಾಂ ಧರ್ಮದ ಪವಿತ್ರ ( ಧಾರ್ಮಿಕ ಗ್ರಂಥ ) ಗ್ರಂಥವಾದ ಕುರಾನ್ ನಿಂದ ಕೆಲವು ಪದ್ಯಗಳನ್ನ ತೆಗೆದುಹಾಕುವಂತೆ ಸುಪ್ರೀಂಕೋರ್ಟ್ ಗೆ ಸಲ್ಲಿಕೆಯಾಗಿದ್ದ ಅರ್ಜಿಯನ್ನ ನ್ಯಾಯಾಲಯವು ವಜಾಗೊಳಿಸಿದೆ. ರಿಟ್ ಅರ್ಜಿಯನ್ನ ವಜಾಗೊಳಿಸಿ ಜೊತೆಗೆ ದಂಡವನ್ನೂ ವಿಧಿಸಿದೆ.
ಉತ್ತರಪ್ರದೇಶದ ಶಿಯಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಸೈಯೆದ್ ವಾಸಿಮ್ ರಿಜ್ವಿ ಅವರು ಸಲ್ಲಿಸಿದ್ದ ಈ ಅರ್ಜಿಯಲ್ಲಿ ಕುರಾನ್ ನ 26 ಶ್ಲೋಕಗಳನ್ನು ತೆಗೆದುಹಾಕಬೇಕು ಎಂದು ಕೋರಲಾಗಿತ್ತು. ‘ಕೆಲವು ಪದ್ಯಗಳ ಅಕ್ಷರಶಃ ವ್ಯಾಖ್ಯಾನವು ನಂಬಿಕೆಯಿಲ್ಲದವರ ವಿರುದ್ಧ ಹಿಂಸಾಚಾರವನ್ನು ಬೋಧಿಸುತ್ತದೆ. ಆದ್ದರಿಂದ ಸದರಿ ಪದ್ಯಗಳನ್ನು ಮದರಸಾಗಳಲ್ಲಿ ಮಕ್ಕಳಿಗೆ ಹೇಳಿಕೊಡುವುದನ್ನು ನಿಲ್ಲಿಸಬೇಕು’ ಎಂದು ವಕೀಲ ಆರ್.ಕೆ.ರಾಯ್ಜಾದ ಹೇಳಿದರು.
ಈ ಅರ್ಜಿಯ ವಿಚಾರಣೆ ನಡೆಸಲು ನಿರಾಕರಿಸಿದ ನ್ಯಾಯಮೂರ್ತಿ ಆರ್.ಎಫ್.ನಾರಿಮನ್ ಅವರು, ಇದು ಸಂಪೂರ್ಣವಾಗಿ ಕ್ಷುಲ್ಲಕವಾದ ರಿಟ್ ಅರ್ಜಿಯಾಗಿದೆ ಎಂದು ಹೇಳಿ 50,000 ರೂ. ದಂಡ ವಿಧಿಸಿದರು.
‘ರಫೇಲ್ ‘ ಖರೀದಿ ವೇಳೆ ಮಧ್ಯವರ್ತಿಗೆ ಹಣ ನೀಡಿರುವ ಆರೋಪ – ಅರ್ಜಿ ವಿಚಾರಣೆಗೆ ಮುಂದಾದ ಸುಪ್ರೀಂ..!
ನಿದ್ದೆಗೆ ಜಾರಿದ್ದ ಪತಿಯ ಕೈಕಾಲು ಕಟ್ಟಿ ಕೊಲೆ ಮಾಡಿದ ಹೆಂಡತಿ …!








