ಸರ್ಕಾರ ಎಸ್‍ಐಟಿ ಅಧಿಕಾರಿಗಳ ಕೈಕಟ್ಟಿ ಹಾಕಿದೆ : ಯುವತಿ ಪರ ವಕೀಲ
ಬೆಂಗಳೂರು : ಸಿಡಿ ಪ್ರಕರಣದಲ್ಲಿ ಯುವತಿ ಉಲ್ಟಾ ಹೊಡೆದಿದ್ದಾಳೆ ಅನ್ನೋ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ಈ ಬಗ್ಗೆ ಯುವತಿ ಪರ ವಕೀಲ ಜಗದೀಶ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ವಕೀಲ ಜಗದೀಶ್, ಈ ರೀತಿಯಾದ ಸುಳ್ಳು ಪ್ರಚಾರ ಯಾರು ಮಾಡುತ್ತಿದ್ದಾರೋ ಗೊತ್ತಿಲ್ಲ.
ಬೇಕು ಅಂತಲೇ ಪ್ರಕರಣವನ್ನು ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ನ್ಯಾಯಾಂಗ ವ್ಯವಸ್ಥೆಯನ್ನು ತಮಾಷೆ ಮಾಡುವುದು ಅಪರಾಧವಾಗುತ್ತದೆ.
ಈಗಾಗಲೇ ಈ ಪ್ರಕರಣ ದಿಕ್ಕು ತಪ್ಪಿ ಹೋಗಿದೆ ಎಂದು ಕಾಣುತ್ತಿದೆ. ನಾವು ಯುವತಿಗೆ ಎಲ್ಲಾ ರೀತಿಯಲ್ಲಿ ಸಪೋರ್ಟ್ ಮಾಡುತ್ತಿದ್ದೇವೆ.
ಎಸ್ ಸೈಟಿಗೆ ಎಲ್ಲಾ ರೀತಿಯ ಸಪೋರ್ಟ್ ಮಾಡುತ್ತಿದ್ದೇವೆ. ಆದರೂ ಆರೋಪಿಯ ತನಿಖೆಯಾಗುತ್ತಿಲ್ಲ ಎಂದು ಹೇಳಿದ್ದಾರೆ.
ಇನ್ನು ಆರೋಪಿಯ ಮೆಡಿಕಲ್ ಚೆಕಪ್, ದಾಖಲೆ ವಶಕ್ಕೆ, ಮಹಜರ್, ಹೇಳಿಕೆ ಇವೆಲ್ಲಾ ಬಾಕಿಯಿದೆ.
ಇಂಥ ಸಮಯದಲ್ಲಿ ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸುವುದು ನ್ಯಾಯಾಲಯಕ್ಕೆ ಯುವತಿಗೆ ಮಾಡುವ ಮೋಸವಾಗಿದೆ.
ಕೇಸ್ ಏನಾಗುತ್ತೋ ಅದು ಬೇರೆ ವಿಚಾರ, ಆದರೆ ನ್ಯಾಯಾಲಯದ ಕೆಲಸಕ್ಕೆ ಮತ್ತು ನ್ಯಾಯಾಲಯದ ಮೇಲೆ ನಂಬಿಕೆ ಇಡೋಣ ಎಂದಿದ್ದಾರೆ.
ಯಾವುದೇ ವಿಚಾರವಿದ್ದರೂ ಮಾಧ್ಯಮದವರು ಪರಿಶೀಲನೆ ಮಾಡಿ ಪ್ರಸಾರ ಮಾಡಿ ಎಂದು ವಿಡಿಯೋದಲ್ಲಿ ವಕೀಲರು ಮನವಿ ಮಾಡಿಕೊಂಡಿದ್ದಾರೆ.










