ಜೆಪಿ ನಗರದ ಹೋಟೆಲ್ನ 19 ಮಂದಿಗೆ ಕೊರೊನಾ ದೃಢ
ಬೆಂಗಳೂರು : ನಗರದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದ್ದು, ಜೆಪಿ ನಗರದ ಹೋಟೆಲ್ ವೊಂದರಲ್ಲಿ ಬರೊಬ್ಬರಿ 19 ಮಂದಿಗೆ ಸೋಂಕಿರುವುದು ದೃಢವಾಗಿದೆ.
ಕಳೆದ ನಾಲ್ಕು ದಿನಗಳ ಹಿಂದೆ ಜೆಪಿ ನಗರದ ಚುಲಾ ಚೌಕಿ ಡಾಬಾದಲ್ಲಿ ಕೆಲಸ ಮಾಡುತ್ತಿದ್ದ 55 ಮಂದಿಯ ಕೊರೊನಾ ಪರೀಕ್ಷೆ ಮಾಡಲಾಗಿತ್ತು.
ಈ ಪೈಕಿ 19 ಜನ ಸಿಬ್ಬಂದಿಗೆ ಕೊರೊನಾ ದೃಢಪಟ್ಟಿದೆ. ಸದ್ಯ ಸೋಂಕಿತರನ್ನ ಹೋಮ್ ಐಸೋಲೇಟ್ ಮಾಡಲಾಗಿದ್ದು, ರೋಗ ಲಕ್ಷಣಗಳು ಹೆಚ್ಚಾದ್ರೆ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದಾರೆ.
ಇನ್ನುಳಿದಂತೆ ಪಾಸಿಟಿವ್ ರೋಗಿಗಳಿಗೆ ಕೊರೊನಾ ಚಿಕಿತ್ಸೆಗೆ ಬೇಕಾಗಿರುವ ಔಷಧಿ ವ್ಯವಸ್ಥೆಯನ್ನ ಬಿಬಿಎಂಪಿ ಮಾಡಿದೆ ಎಂದು ಬಿಬಿಎಂಪಿ ದಕ್ಷಿಣ ವಲಯ ಆರೋಗ್ಯಾಧಿಕಾರಿ ಶಿವಕುಮಾರ್ ಮಾಹಿತಿ ನೀಡಿದ್ದಾರೆ.