BIGGBOSS 8 – 7ನೇ ವಾರ… ಡೇಂಜರ್ ಝೋನ್ ನಲ್ಲಿ 8 ಮಂದಿ – ಹೋಗೋದ್ಯಾರು , ಸೇಫ್ ಆಗೋದ್ಯಾರು..?
ಬೆಂಗಳೂರು : ಬಿಗ್ ಬಾಸ್ 8 ನೇ ಆವೃತ್ತಿಯ 6 ವಾರಗಳು ಮುಕ್ತಾಯಗೊಂಡಿದೆ. 7 ನೇ ವಾರದ ಎಲಿಮಿನೇಷನ್ ರೌಂಡ್ ಗೆ ಒಟ್ಟು 8 ಸ್ಪರ್ಧಿಗಳು ಆಯ್ಕೆಯಾಗಿದ್ದಾರೆ.
ವೈಲ್ಡ್ ಕಾರ್ಡ್ ಮೂಲಕ ಕಳೆದ ವಾರವಷ್ಟೇ ದೊಡ್ಮನೆಗೆ ಕಾಲಿಟ್ಟಿದ್ದ ಪ್ರಿಯಾಂಕಾ ತಿಮ್ಮೇಶ್ ನಾಮಿನೇಟ್ ಮಾಡುವಂತಿಲ್ಲ ಎಂದು ಬಿಗ್ ಬಾಸ್ ಸೂಚಿಸಿದ್ದರು. ಅದರಂತೆ ಸ್ಪರ್ಧಿಗಳು ಪ್ರಿಯಾಂಕಾ ಹೆಸರನ್ನ ಬಿಟ್ಟು ಮಿಕ್ಕವರನ್ನ ನಾಮಿನೇಟ್ ಮಾಡಿದ್ದಾರೆ.
ಕಳೆದ ವಾರ ಬಹಿರಂಗವಾಗಿಯೇ ನಡೆದಿದ್ದ ನಾಮಿನೇಷನ್ ಪ್ರಕ್ರಿಯೆ ಈ ವಾರ ಮತ್ತೆ ರಹಸ್ಯವಾಗಿ ನಡೆದಿದೆ. ಸ್ಪರ್ಧಿಗಳು ಇಬ್ಬಿಬ್ಬರು ಸ್ಪರ್ಧಿಗಳನ್ನ ನಾಮಿನೇಟ್ ಮಾಡಿ ನಾನಾ ಕಾರಣಗಳನ್ನೂ ನೀಡಿದ್ದಾರೆ.
ನಾಮಿನೇಟ್ ಆಗಿರುವ ಸ್ಪರ್ಧಿಗಳು
ಶಮಂತ್ – ಕಿಚ್ಚ ಸುದೀಪ್ ಅವರು ಶಮಂತ್ ಅವರನ್ನು ಈ ವಾರದ ಎಲಿಮಿನೇಷನ್ ಗೆ ನೇರವಾಗಿಯೇ ನಾಮಿನೇಟ್ ಮಾಡಿದ್ದಾರೆ. ಕಾರಣ ವೈಜಯಂತಿ ಮನೆಯಿಂದ ಹೊರಗಡೆ ಸ್ವಿಚ್ಛೆಯಿಂದ ಹೋದ ಹಿನ್ನೆಲೆ ಶಮಂತ್ ಗೌಡ ಎಲಿಮಿನೇಟ್ ಆಗಿದ್ದರೂ ಕೂಡ ಸೇಫ್ ಆಗಿದ್ದರು. ಹೀಗಾಗಿ ಸುದೀಪ್ ಶಮಂತ್ ರನ್ನ ನೇರವಾಗಿಯೇ ನಾಮಿನೇಟ್ ಮಾಡಬೇಕಾಯ್ತು.
ದಿವ್ಯಾ ಉರುಡು – ಈ ವಾರದ ಮನೆಯ ಕ್ಯಾಪ್ಟನ್ ಪ್ರಶಾಂತ್ ಸಂಬರ್ಗಿ ಬಿಗ್ ಬಾಸ್ ಕೊಟ್ಟ ವಿಶೇಷ ಅಧಿಕಾರವನ್ನ ಬಳಸಿಕೊಂಡು ಉರುಡುಗರನ್ನ ನಾಮಿನೇಟ್ ಮಾಡಿದ್ರು. ಇದಕ್ಕೆ ಕಾರಣ ನೀಡಿದ ಸಂಬರ್ಗಿ ಬಿಗ್ ಬಾಸ್ ಮನೆಗೆ ದಿವ್ಯಾ ಉರುಡುಗ ಕೊಡುಗೆ ಕನಿಷ್ಠ. ಟಾಸ್ಕ್ ನಲ್ಲಿಷ್ಟೇ ಅವರು ಉತ್ತೀರ್ಣ. ಮನೆಯ ಇನ್ನೀತರ ಕೆಲಸದಲ್ಲಿ ಸ್ಪಂದಿಸುತ್ತಿಲ್ಲ ಎಂದಿದ್ದಾರೆ.
ಚಂದ್ರಚೂಡ್ ಚಕ್ರವರ್ತಿ
ವಿಶ್ವನಾಥ್
ರಾಜೀವ್
ಮಂಜು
ಅರವಿಂದ್
ದಿವ್ಯಾ ಸುರೇಶ್
ಈವರೆಗೂ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿರುವ ಸ್ಪರ್ಧಿಗಳು
ಮೊದಲನೇ ವಾರ ಟಿಕ್ ಟಾಕ್ ಸ್ಟಾರ್ ಧನುಶ್ರೀ
2ನೇ ವಾರ ನಿರ್ಮಲಾ ಚನ್ನಪ್ಪ
3ನೇ ವಾರ ಗೀತಾ ಭಾರತಿ ಭಟ್
4ನೇ ವಾರ ಚಂದ್ರಕಲಾ ಮೋಹನ್
5ನೇ ವಾರ ಶಂಕರ್ ಅಶ್ವಥ್
6ನೇ ವಾರ ಶಮಂತ್ ಎಲಿಮಿನೇಟ್ ಆದ್ರೂ ಸೇಫ್ ಆಗಿದ್ದಾರೆ. ಆದ್ರೆ ವೈಜಜಯಂತಿ ಮನೆಯಿಂದ ಹೊರ ನಡೆದಿದ್ದಾರೆ. ( ಸ್ವಇಚ್ಛೆಯಿಂದ ಮನೆಯಿಂದ ಹೊರಹೋದ ವೈಜಯಂತಿ ಆಡಿಗ )








