ಸೆಲ್ಫಿ ಕ್ರೇಜ್ ಗೆ ಬಿದ್ದು ಕಾಳಿನದಿಗೆ ಬಿದ್ದ ಪ್ರೇಮಿಗಳ ಶವಪತ್ತೆ..!
ಕಾರವಾರ : ಈಗಿನ ಯುವಕ ಯುವತಿಯರು ಸೆಲ್ಫಿ ಕ್ರೇಜ್ ಎಷ್ಟರ ಮಟ್ಟಿಗಿದೆಯಂದ್ರೆ , ಪ್ರಾಣದ ಜೊತೆಯಲ್ಲೇ ಚೆಲ್ಲಾಟವಾಡ್ತಾರೆ. ವಿಭಿನ್ನವಾಗಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಹೋಜಿಗೆ ಬಿದ್ದು ಎಷ್ಟೋ ಜನರು ಪ್ರನವನ್ನೇ ಕಳೆದುಕೊಮಡಿದ್ದಾರೆ. ಆದ್ರೂ ಸಹ ಆಗಾಗ ಇಂತಹ ಪ್ರೆಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಅಂತಹದ್ದೇ ಘಟನೆ ಈಗ ಕಾರವಾರದಲ್ಲೂ ನಡೆದುಹೋಗಿದೆ. ಜೋಡಿಯೊಂದು ನದಿಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಕಾಲುಜಾರಿ ಸೇತುವೆ ಕೆಳಗೆ ಪ್ರೇಮಿಗಳು ಬಿದ್ದಿದ್ದರು. ಸತತ ಹುಡುಕಾಟದ ಬಳಿಕ ಇಬ್ಬರ ಮೃತದೇಹಗಳನ್ನ ಹೊರತೆಗೆಯಲಾಗಿದೆ. ಫ್ಲೈ ಕ್ಯಾಚರ್ ಎಂಬ ರ್ಯಫ್ಟಿಂಗ್ ತಂಡದ ಸದಸ್ಯರು ಇಬ್ಬರ ಶವಗಳನ್ನು ಕಾಳಿ ನದಿಯಿಂದ ಹುಡುಕಿ ಹೊರ ತೆಗೆದಿದ್ದಾರೆ. ಈ ಘಟನೆ ಜೋಯಿಡಾ ತಾಲೂಕಿನ ಗಣೇಶಗುಡಿ ಬಳಿಯ ಸೂಪಾ ಡ್ಯಾಂ ಬಳಿ ಇರುವ ಕಾಳಿ ಸೇತುವೆ ಬಳಿ ನಡೆದಿತ್ತು.
ಸಂಜೆ ಗಣೇಶಗುಡಿಯ ಡ್ಯಾಂ ಭಾಗದಲ್ಲಿ ದಾಂಡೇಲಿಯಿಂದ ಆಟೋದಲ್ಲಿ ಬಂದು ಗಣೇಶಗುಡಿಯ ಸೂಫಾ ಡ್ಯಾಮ್ ಗೆ ಭೇಟಿ ನೀಡಿದ್ದ ಪ್ರೇಮಿಗಳು, ಡ್ಯಾಮ್ ಎದುರು ಭಾಗದಲ್ಲಿ ಇರುವ ಸೇತುವೆಯ ಕಟ್ಟೆಯ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿದ್ದಾರೆ. ಈ ವೇಳೆ ಇಬ್ಬರೂ ಕಾಲುಜಾರಿ ಕಾಳಿ ನದಿಗೆ ಬಿದ್ದಿದ್ದು ತೇಲಿ ಹೋಗಿದ್ದರು. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಇವರಿಗಾಗಿ ಹುಡುಕಾಟ ನಡೆಸುತ್ತಿದ್ದರು. ಇಂದು ಮೃತದೇಹಗಳು ಪತ್ತೆಯಾಗಿವೆ. ಬೀದರ್ ನ ಕರ್ನಾಟಕ ಕಾಲೇಜ್ ನ ಬಿಎ ವಿದ್ಯಾರ್ಥಿ ಪುರುಷೋತ್ತಮ ಪಾಟೀಲ ಹಾಗೂ ಬೀದರ್ ಮೂಲದ ಕಲಬುರ್ಗಿಯಲ್ಲಿ ಕಾಲೇಜ್ ವಿದ್ಯಾಭ್ಯಾಸ ಮಾಡುತ್ತಿರುವ ರಕ್ಷಿತಾ ಎಸ್. ಮೃತ ದುರ್ದೈವಿಗಳಾಗಿದ್ದಾರೆ. ರಾಮನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ಮಗನ ಕೊಂದ ಪಾಪಿ ಉಗ್ರರ ಕ್ಷಮಿಸಲು ಸಿದ್ಧ’..!