ಪತಿ ಸ್ನೇಹಿತರಿಂದ ಮಹಿಳೆ ಮೇಲೆ ಗ್ಯಾಂಗ್ ರೇಪ್ – ದೂರು ನೀಡಿದಕ್ಕೆ ಹೆಂಡತಿಗೇ ಹೊಡೆದು ಸ್ನೇಹಿತರ ಪರ ನಿಂತ ಗಂಡ..!
ಉತ್ತರಪ್ರದೇಶ : ಪಾನೀಯದಲ್ಲಿ ಮತ್ತು ಬರುವ ಪದಾರ್ಥ ಬೆರೆಸಿ ಸ್ನೇಹಿತನ ಪತ್ನಿಗೆ ಕುಡಿಸಿ ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಅಪರಾಧಗಳ ಆಗರ ಉತ್ತರಪ್ರದೇಶದ ಭುಲಂದೇಶ್ವರದಲ್ಲಿ ಬೆಳಕಿಗೆ ಬಂದಿದೆ.
ಇನ್ನೂ ಆಘಾತಕಾರಿ ವಿಚಾರವೆಂದ್ರೆ ಸಂತ್ರಸ್ತೆ ಈ ಬಗ್ಗೆ ದೂರು ನೀಡ್ತಿದ್ದಂತೆ ಪತಿ ಆಕೆಯನ್ನ ಹೊಡೆದು ಬಡೆದು ಸ್ನೇಹಿತರಿಗೇ ಸಪೋರ್ಟ್ ಮಾಡಿದ್ದಾನೆ. ಅಲ್ದೇ ಆಕೆಯನ್ನ ಮನೆಯಿಂದ ಹೊರಗೆ ಹಾಕಿದ್ದಾನೆ ಎನ್ನಲಾಗಿದೆ.
ಅಷ್ಟೇ ಅಲ್ಲ ಆರೋಪಿಗಳು ಅತ್ಯಾಚಾರದ ವೇಳೆ ಸೆರೆ ಹಿಡಿದಿದ್ದ ಮಹಿಳೆಯ ಅಶ್ಲೀಲ ಫೋಟೋಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ ಎಂದು ಮಹಿಳೆ ಆರೊಪಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಅಹಾರ ಗ್ರಾಮದಲ್ಲಿ ವಿವಾಹಿತ ಮಹಿಳೆಗೆ ಆಕೆಯ ಪತಿಯ ಸ್ನೇಹಿತರು ಮತ್ತು ಬರುವ ಪಾನೀಯ ಕುಡಿಸಿ ಬಳಿಕ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಅಲ್ದೇ ಕಾಮುಕರು ಆಕೆಯ ಅಶ್ಲೀಲ ಫೋಟೋಗಳನ್ನೂ ಕೂಡ ಸೆರೆ ಹಿಡಿದು ಬ್ಲಾಕ್ ಮೇಲ್ ಮಾಡಿ ಪದೇ ಪದೇ ಅತ್ಯಾಚಾರವೆಸಗಿದ್ದಾರೆ.
ಇಬ್ಬರೂ ಆರೋಪಿಗಳನ್ನ ಗುರುತಿಸಲಾಗಿದೆ. ಒಬ್ಬನ ಹೆಸರು ಬಬ್ಲೂ , ಮತ್ತೊಬ್ಬನ ಹೆಸರು ಲೋಕೇಶ್ ಎಂದು ಹೇಳಲಾಗಿದೆ. ಈ ಇಬ್ಬರೂ ಮಹಿಳೆಗೆ ತಂಪು ಪಾನೀಯ ನೀಡಿದ್ದಾರೆ. ಬಳಿಕ ಅತ್ಯಾಚಾರವೆಸಗಿದ್ದಾರೆ. ಹೀಗೆ ಹಲವು ದಿನಗಳ ವರೆಗೆ ಮಹಿಳೆಯ ಮೇಲೆ ಪದೇ ಪದೇ ಗ್ಯಾಂಗ್ ರೇಪ್ ನಡೆದಿದೆ. ಬಳಿಕ ನೊಂದ ಮಹಿಳೆ ತನ್ನ ಪತಿಯ ಬಳಿ ಈ ಬಗ್ಗೆ ಹೇಳಿಕೊಂಡಾಗ , ಪತಿ ಆಕೆಯನ್ನ ಹೊಡೆದು ಮನೆಯಿಂದ ಆಚೆ ಹಾಕಿದ್ದಾನೆ ಎನ್ನಲಾಗಿದೆ.
ಇನ್ನೂ ದೂರಿನಲ್ಲಿ ತನ್ನ ಪತಿ ವೈದ್ಯಕೀಯ ಪ್ರತಿನಿಧಿಯಾಗಿದ್ದು, ಆತನ ಸ್ನೇಹಿತರು ಆಗಾಗ ಮನೆಗೆ ಬರುತ್ತಾ ಇದ್ದರು. ತನ್ನ ಪತಿ ಅವರ ಜೊತೆಗೆ ಮನೆಯಲ್ಲಿ ಕುಡಿಯುವುದು, ಕಾರ್ಡ್ಸ್ ಆಡುವುದು ಜಾರಿಯಲ್ಲಿತ್ತು. 4 ತಿಂಗಳ ಹಿಂದೆ ನನ್ನ ಗಂಡ ಮನೆಯಲ್ಲಿ ಇಲ್ಲದೇ ಇದ್ದ ಸಂದರ್ಭದಲ್ಲಿ ಮನೆಗೆ ಬಂದ ಆರೋಪಿಗಳು ನನಗೆ ಕೋಲ್ಡ್ ಡ್ರಿಂಕ್ಸ್ ನೀಡಿ ನನ್ನ ಪತಿ ಇದನ್ನ ಕಳುಹಿಸಿ ಕೊಟ್ಟಿದ್ದಾರೆ ಎಂದಿದ್ದರು. ಇದನ್ನ ಕುಡಿದ ನಂತರ ನನ್ನ ಮೇಲೆ ಅತ್ಯಾಚಾರ ನಡೆದಿತ್ತು ಎಂದು ತಿಳಿಸಿದ್ದಾರೆ.
ಅಲ್ದೇ ಅಶ್ಲೀಲ ಫೋಟೋಗಳನ್ನ ಆರೋಪಿಗಳು ವೈರಲ್ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಪೊಲೀಸರು ಪತಿಯನ್ನೂ ಸೇರಿ ಮೂವರು ಆರೋಪಿಗಳನ್ನ ಬಂಧಿಸಿ ತನಿಖೆ ಮುಂದುವರೆಸಿದ್ದಾರೆ..
‘ಮಗನ ಕೊಂದ ಪಾಪಿ ಉಗ್ರರ ಕ್ಷಮಿಸಲು ಸಿದ್ಧ’..!








