ಅಮೆರಿಕಾ ವಿರುದ್ಧ ಸೇಡು ತೀರಿಸಿಕಕೊಂಡ ರಷ್ಯಾ..!
ಅಮೆರಿಕಾ – ರಷ್ಯಾ : ಅಮೆರಿಕಾ ಹಾಗೂ ರಷ್ಯಾ ನಡುವಿನ ಶೀತಲ ಸಮರ ಜಾರಿಯಲ್ಲಿದೆ. ಅಮೆರಿಕಾ ವಿರುದ್ಧ ರಷ್ಯಾದ ಪುಟಿನ್ ಸರ್ಕಾರ ಪ್ರತೀಕಾರ ತೀರಿಸಿಕೊಂಡಿದೆ. ರಷ್ಯಾ ಮೇಲೆ ಅಮೆರಿಕ ಸ್ಯಾಂಕ್ಷನ್ಸ್ ಹೇರಿದ ಬೆನ್ನಲ್ಲೇ ರಷ್ಯಾದಲ್ಲಿರೋ ಅಮೆರಿಕದ 10 ರಾಯಭಾರಿಗಳು ರಷ್ಯಾ ಬಿಟ್ಟು ಹೋಗುವಂತೆ ಪುಟಿನ್ ಸರ್ಕಾರ ಸೂಚನೆ ಕೊಟ್ಟಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ, ಅಮೆರಿಕ ಮೇಲೆ ಸೈಬರ್ ದಾಳಿ, ಯುಕ್ರೇನ್ಗೆ ಬೆದರಿಕೆ ಸೇರಿದಂತೆ ಹಲವು ಆರೋಪಗಳ ಹಿನ್ನೆಲೆಯಲ್ಲಿ ಜೋ ಬೈಡೆನ್ ಸರ್ಕಾರ ರಷ್ಯಾ ಮೇಲೆ ಹಲವು ನಿರ್ಬಂಧಗಳನ್ನ, ಸ್ಯಾಂಕ್ಷನ್ ಗಳನ್ನ ಹೇರಿತ್ತು.
ಅಮೆರಿಕದಲ್ಲಿರೋ ರಷ್ಯಾದ 10 ರಾಜತಾಂತ್ರಿಕರನ್ನ ರಷ್ಯಾಗೆ ವಾಪಸ್ ಕಳಿಸೋದಾಗಿ ಹೇಳಿತ್ತು. ಇದಕ್ಕೆ ಪ್ರತೀಕಾರವಾಗಿ ರಷ್ಯಾ ಕೂಡ 10 ಜನ ಅಮೆರಿಕದ ರಾಜತಾಂತ್ರಿಕರನ್ನ ಅಮೆರಿಕಕ್ಕೆ ವಾಪಸ್ ಹೋಗುವಂತೆ ಸೂಚಿಸಿದೆ. ಜೊತೆಗೆ, ಒಳ್ಳೆತನವನ್ನ ತೋರಿಸಲು, ಸಂಘರ್ಷ ಮತ್ತು ಹಗೆತನ ಬಿಡಲು ಅಮೆರಿಕಕ್ಕೆ ಇದು ಸರಿಯಾದ ಸಮಯ. ಇಲ್ಲದಿದ್ರೆ ಅಮೆರಿಕಗೆ ನೋವುಂಟು ಮಾಡುವ ಸರಣಿ ನಿರ್ಧಾರಗಳನ್ನ ತೆಗೆದುಕೊಳ್ಳಬೇಕಾಗುತ್ತೆ. ಅಲ್ಲದೆ ಅಮೆರಿಕಗೆ ಆರ್ಥಿಕವಾಗಿ ಪೆಟ್ಟು ಕೊಡುವ ಮತ್ತು ರಷ್ಯಾದಲ್ಲಿರೋ ಅಮೆರಿಕದ ರಾಜತಾಂತ್ರಿಕರ ಸಂಖ್ಯೆಯನ್ನ 300ಕ್ಕೆ ಇಳಿಸೋ ಅವಕಾಶ ನಮ್ಮ ಬಳಿ ಇದ್ದರೂ ಅದನ್ನ ಸದ್ಯಕ್ಕೆ ತಡೆ ಹಿಡಿದಿದ್ದೇವೆ ಅಂತ ರಷ್ಯಾದ ವಿದೇಶಾಂಗ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ.
ಅಮೆರಿಕಾದಲ್ಲಿ ಭಾರತೀಯರೇ ಟಾರ್ಗೆಟ್ – ನಾಲ್ವರು ಸಿಖ್ಖರು ಸೇರಿ 8 ಮಂದಿಯ ಕೊಲೆ