ವಿದ್ಯಾರ್ಥಿನಿಯನ್ನು ಕಿಡ್ನಾಪ್ ಮಾಡಿ ಮನೆಯಲ್ಲಿ ಬಂಧಿಸಿಟ್ಟಿದ್ದ ಶಾಲಾ ಶಿಕ್ಷಕ..!
ತಮಿಳುನಾಡು : 31 ವರ್ಷದ ಸರ್ಕಾರಿ ಶಾಲಾ ಶಿಕ್ಷಕನೋರ್ವ 16 ವರ್ಷದ ಪ್ರಥಮ ದರ್ಜೆ ಪಿಯುಸಿ ವಿದ್ಯಾರ್ಥಿಯನ್ನ ಕಿಡ್ನಾಪ್ ಮಾಡಿ ಮನೆಯಲ್ಲಿ ಇಟ್ಟುಕೊಂಡಿದ್ದ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಮಾಥೂರಿನಲ್ಲಿ ನಡೆದಿದೆ.
ಹೌದು… ಈ ಶಿಕ್ಷಕ ಅಪ್ರಾಪ್ತ ಬಾಲಕಿಯನ್ನ ಬಲವಂತವಾಗಿ ಮದುವೆಯಾಗುವ ಸಲುವಾಗಿ ಆಕೆಯನ್ನ ಅಪಹರಿಸಿದ್ದ ಎಂಬುದು ವಿಚಾರಣೆ ವೇಳೆ ಬಹಿರಂಗವಾಗಿದೆ. ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಮೂರ್ತಿ ಮತ್ತು ಕಾವ್ಯ ದಂಪತಿ ಕೃಷ್ಣಗಿರಿ ಜಿಲ್ಲೆಯ ಮಾಥೂರಿನ ಬಳಿಯಿರುವ ಜಿಂಜಂಪತಿಯ ನಿವಾಸಿಗಳು. ದಂಪತಿಗೆ 16 ವರ್ಷದ ಮಗಳಿದ್ದಾಳೆ. ಇವರು ತಮ್ಮ ಮಗಳೊಂದಿಗೆ ತಿರುವಣ್ಣಮಲೈ ಜಿಲ್ಲೆಯ ಮೇಲ್ಸೆಂಗಮ್ ನಲ್ಲಿ ಕೂಲಿಯಾಳುಗಳಾಗಿ ಕೆಲಸ ಮಾಡುತ್ತಿದ್ದರು. ದಂಪತಿಯ ಮಗಳು ತಿರುವಣಮಲೈನ ಡ್ಯಾನಿಯಲ್ ಮಿಷನ್ ಸ್ಕೂಲ್ನಲ್ಲಿ ಪ್ರಥಮ ವರ್ಷದ ಪಿಯು ವ್ಯಾಸಂಗ ಮಾಡುತ್ತಿದ್ದಾಳೆ.
ಏಪ್ರಿಲ್ 6ರಂದು ದಂಪತಿ ತನ್ನ ಮಗಳೊಂದಿಗೆ ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಲು ತವರಿಗೆ ತೆರಳುತ್ತಾರೆ. ಅದೇ ದಿನ ಇದ್ದಕ್ಕಿದ್ದಂತೆ ಮಗಳು ಕಾಣೆಯಾಗಿದ್ದಾಳೆ. ಎಷ್ಟೇ ಹುಡುಕಾಡಿದರು ಮಗಳು ಸಿಗದೇ ಹೋದ ಪರಿಣಾಮ ಗಾಬರಿಗೊಂಡಿದ್ದ ಪೋಷಕರು ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಾಥೂರು ಪೊಲೀಸರು ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಈ ವೇಳೆ ವಿದ್ಯಾರ್ಥಿನಿಯನ್ನು ತಿರುವಣ್ಣಾಮಲೈ ಜಿಲ್ಲೆಯ ನಾಗನೂರು ಗ್ರಾಮದ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕ ಚರಣ್ರಾಜ್ ಎಂಬಾತ ಕಿಡ್ನಾಪ್ ಮಾಡಿದ್ದ ವಿಚಾರ ಗೊತ್ತಾಗಿದೆ. ತಕ್ಷಣ ಆತನನ್ನ ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಆತ ಬಾಲಕಿಯನ್ನ ಬಲವಂತವಾಗಿ ಮದುವೆಯಾಗುವುದಕ್ಕೆ ಅಪಹರಿಸಿದ್ದ ವಿಚಾರ ಬೆಳಕಿಗೆ ಬಂದಿದೆ.
‘ಕುಂಭಮೇಳದಿಂದ ಕೊರೊನಾ ಪ್ರಸಾದದ ರೂಪದಲ್ಲಿ ಹರಡಲಿದೆ’..!