Mangalore ಹಾವು ಕಚ್ಚಿ ಉಪ್ಪಿನಂಗಡಿಯ ಸ್ನೇಕ್ ಮುಸ್ತ ಸಾವು
ಮಂಗಳೂರು : ಹಾವು ಹಿಡಿಯುವ ವೇಳೆ ಹಾವು ಕಡಿತಕ್ಕೊಳಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ನಿವಾಸಿ ಸ್ನೇಕ್ ಮುಸ್ತ ಮೃತಪಟ್ಟಿದ್ದಾರೆ.
ಇವರು ಉಪ್ಪಿನಂಗಡಿಯ 34 ನೆಕ್ಕಿಲಾಡಿ ಗ್ರಾಮದ ಬೊಳಂತಿಲ ಹೊಸ ಕಾಲನಿ ನಿವಾಸಿಯಾಗಿದ್ದಾರೆ.
ಇವರು ವೃತ್ತಿಯಲ್ಲಿ ಆಟೋ ರಿಕ್ಷಾ ಚಾಲಕರಾಗಿದ್ದು, ಹಾವುಗಳನ್ನು ಹಿಡಿದು ರಕ್ಷಿಸಿ ಕಾಡಿಗೆ ಬಿಡುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡಿದ್ದರು.
ಇದೇ ಕಾರಣಕ್ಕೆ ಇವರು ಸ್ಥಳೀಯವಾಗಿ ಸ್ನೇಕ್ ಮುಸ್ತಾ ಎಂದು ಖ್ಯಾತಿ ಪಡೆದಿದ್ದರು.
ನೇಜಿಕಾರಿನಲ್ಲಿ ಮನೆಯೊಂದಕ್ಕೆ ನಾಗರಹಾವು ಬಂತೆಂದು ಮುಸ್ತಾಫವರಿಗೆ ಕರೆ ಬಂದಿತ್ತು. ಅದನ್ನು ಹಿಡಿದು ರಕ್ಷಿಸಲು ಮುಸ್ತ ತೆರಳಿದ್ದರು.
ಹಾವು ಹಿಡಿಯುತ್ತಿದ್ದ ಸಂದರ್ಭ ಇವರ ಕೈಗೆ ಹಾವು ಕಚ್ಚಿದ್ದು, ತೀವ್ರ ಅಸ್ವಸ್ಥಗೊಂಡಿದ್ದರು.
ಕೂಡಲೇ ಅವರನ್ನ ಪುತ್ತೂರು ಆಸ್ಪತ್ರೆಗೆ ಸಾಗಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿಗೆ ಕರೆದೊಯ್ಯುವ ವೇಳೆ ಹಾದಿ ಮಧ್ಯೆ ಇವರು ಮೃತಪಟ್ಟಿದ್ದಾರೆ.










