ಮುಂಬೈ : ಲಾಕ್ ಡೌನ್ ಹಿನ್ನೆಲೆ ದೇಶದ ಜನತೆ ಮನೆಯಲ್ಲೇ ಕಾಲಕಳೆಯುತ್ತಿದ್ದಾರೆ. ಹೆಚ್ಚಿನ ಜನರು ಲಾಕ್‌ಡೌನ್ ಮುಗಿದ ಕೂಡಲೇ ಮನೆಯಿಂದ ಹೊರಗೆ ಹೋಗಬೇಕು, ಶಾಪಿಂಗ್ ಮಾಡಬೇಕು, ಸಿನಿಮಾ ನೋಡಬೇಕು ಎಂದು ಆಲೋಚಿಸುತ್ತಿದ್ದಾರೆ. ಆದ್ರೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಮಾತ್ರ ಬೇರೆಯೇ ಪ್ಲ್ಯಾನ್ ಮಾಡಿದ್ದು ಈ ಕುರಿತಾಗಿ ಸಂದರ್ಶನ ಒಂದರಲ್ಲಿ ತಿಳಿಸಿದ್ದಾರೆ.
ಸಂದರ್ಶನದಲ್ಲಿ ಲಾಕ್‌ಡೌನ್ ಕುರಿತಾಗಿ ಮಾತನಾಡಿದ ಅವರು, ಲಾಕ್‌ಡೌನ್ ಮುಗಿದ ಕೂಡಲೇ ನಾನು ಮೊದಲು ಮಾಡುವ ಕೆಲಸ ನನ್ನ ಮೂವರು ಮಕ್ಕಳನ್ನು ಶಾಲೆಗೆ ಡ್ರಾಪ್ ಮಾಡಿ ಮನೆಗೆ ಬಂದು ಆರಾಮವಾಗಿ ಉಸಿರಾಡಬೇಕು ಎಂದು ಹೇಳಿದ್ದಾರೆ.
ನನ್ನ ಮೂವರು ಮಕ್ಕಳು ಬಹಳ ತುಂಟರು. ಮನೆಯಲ್ಲಿ ಯಾವಾಗಲೂ ಗಲಾಟೆ ಮಾಡುತ್ತಲ್ಲೇ ಇರುತ್ತಾರೆ. ಅವರನ್ನು ಹಾಗೆಯೇ ಬಿಟ್ಟು ಹೋಗುವಂತೆ ಇಲ್ಲ. ನಿರಂತರವಾಗಿ ಯಾರದರೂ ಇರಲೇ ಬೇಕಾಗುತ್ತದೆ. ಲಾಕ್‌ಡೌನ್ ಮುಗಿದ ಕೂಡಲೇ ಮೊದಲು ಅವರನ್ನು ಶಾಲೆಗೆ ಬಿಟ್ಟು ನಾನು ಮನೆಗೆ ಬಂದು ನೆಮ್ಮದಿಯ ನಿಟ್ಟುಸಿರು ಬಿಡಬೇಕು ಎಂದು ಹೇಳಿದ್ದಾರೆ.







