ಸದ್ಯದ ಪರಿಸ್ಥಿತಿಗೆ ಜನರೇ ಕಾರಣ : ಡಾ.ಕೆ.ಸುಧಾಕರ್
ಬೆಂಗಳೂರು : ಸದ್ಯ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಇಷ್ಟೊಂದು ತೀವ್ರ ಸ್ವರೂಪದಲ್ಲಿ ಹರಡಲು ಜನರ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ.
ಕೊರೊನಾ ಹೆಚ್ಚಳ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಲಾಕ್ ಡೌನ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುಧಾಕರ್, ಜನರು ಕೋವಿಡ್ ನಿಯಮ ಪಾಲಿಸಿದರೇ ಲಾಕ್ ಡೌನ್ ಸೀಲ್ ಡೌನ್ ಅವಶ್ಯಕತೆ ಇಲ್ಲ. ಜನರು ಕೊರೊನಾವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಸರ್ಕಾರ ಎಷ್ಟೆ ಎಚ್ಚರಿಸುವ ಕೆಲಸ ಮಾಡಿದ್ರೂ ಜನರು ಕೇಳುತ್ತಿಲ್ಲ. ನಿಜವಾಗಲೂ ಜನರಿಗೆ ಕೊರೊನಾ ಬಗ್ಗೆ ಅರಿವಿರಬೇಕಾಗಿತ್ತು. ನಾವು ಎಚ್ಚರದಿಂದ ಇರಬೇಕು, ಮಾಸ್ಕ್ ಧರಿಸಬೇಕು ಅಂತಾ ಜನರಿಗೆ ಅರಿವಿರಬೇಕಿತ್ತು. ಆದ್ರೆ ಜನರು ಯಾಕೋ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಬೇಸರ ಹೊರಹಾಕಿದರು.
ಇನ್ನು ಇದೇ ವೇಳೆ ಲಾಕ್ ಡೌನ್ ಬಗ್ಗೆ ಸುಳಿವು ನೀಡಿದ ಸಚಿವರು, ಜನರು ಕೊರೊನಾ ನಿಯಮ ಪಾಲಿಸಬೇಕಾಗಿತ್ತು. ಆದ್ರೆ ಜನರು ನಿಯಮಗಳನ್ನ ಪಾಲಿಸುತ್ತಿಲ್ಲ. ನಾವು ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇವೆ. ಜನರ ನಡೆಯಿಂದ ಸರ್ಕಾರ ಅನಿವಾರ್ಯವಾಗಿ ಕಠಿಣ ಕ್ರಮ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿದೆ ಎಂದು ಹೇಳಿದರು.










