BIGGBOSS 8 : ತಂತ್ರಗಾರಿಕೆ ಇರಬೇಕು, ಕುತಂತ್ರ ಅಲ್ಲ… ನಿಧಿ , ಮಂಜು , ದಿವ್ಯಾ ವಿರುದ್ಧ ಅರವಿಂದ್ ಫುಲ್ ಗರಂ..!
ಹಾಸ್ಟೆಲ್ ಟಾಸ್ಕ್ ವೇಳೆ ನಿಧಿ ಮಾತು ಕೇಳಿ ಮೋಸದಾಟ ಆಡಿರುವ ಮಂಜು ಹಾಗೂ ದಿವ್ಯ ಸುರೇಶ್ ಮನೆ ಮಂದಿಯ ನಂಬಿಕೆ ಕಳೆದುಕೊಂಡಿದ್ದಾರೆ. ಮುಜುಗರಕ್ಕೂ ಈಡಾಗಿದ್ದಾರೆ. ಈ ವಾರದ ಕ್ಯಾಪ್ಟನ್ ಆಗಿರುವ ಅರವಿಂದ್ ಇದೇ ವಿಚಾರವಾಗಿ ಮಾತನಾಡಿದ್ದು, ಅವರು ಒಂದೇ ಒಂದು ಹೇಳಿಕೆ ಮೂಲಕ ಮೂವರನ್ನೂ ಸಖತ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಅರವಿಂದ್ ಒಂದೇ ಒಂದು ಡೈಲಾಗ್ ಹೊಡೆಯೋ ಮೂಲಕ ದಿವ್ಯಾ ಸುರೇಶ್ , ಮಂಜು, ನಿಧಿ ಸುಬ್ಬಯ್ಯರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ ಕ್ಯಾಪ್ಟನ್ಸಿಯ ಜವಾಬ್ದಾರಿ ಹಿಡಿತದ ಝಲಕ್ ನೀಡಿದ್ದಾರೆ. ಕಳೆದ ವಾರದ ಕಳಪೆ ಮತ್ತು ಅತ್ಯುತ್ತಮ ಆಟಗಾರ ಆಯ್ಕೆ ನಡೆಯುತ್ತಿದ್ದ ವೇಳೆ ಹಾಸ್ಟೆಲ್ ಟಾಸ್ಕ್ ನಲ್ಲಿ ವಾರ್ಡನ್‌ಗಳಾಗಿದ್ದ ನಿಧಿ ಸುಬ್ಬಯ್ಯ, ಪ್ರಶಾಂತ್ ಸಂಬರಗಿ ಜೊತೆ ದಿವ್ಯಾ ಸುರೇಶ್ ಅವರನ್ನು ಮನೆ ಸದಸ್ಯರು ಕಳಪೆಗೆ ನಾಮಿನೆಟ್ ಮಾಡಿದರು.
ಕೊನೆಗೆ ನಾಯಕನ ಸರದಿ ಬಂದಾಗ ಅರವಿಂದ್, ನಾನು ನಿಧಿಗೆ ಕಳಪೆ ಕೊಡುತ್ತೇನೆ. ನಾನು ತುಂಬಾ ಫೇತ್ ಇಟ್ಟಿದ್ದೆ. ಹೀಗೆ ಆಗಲ್ಲ ಅಂತ. ಹೇಗೆ ಎಕ್ಸ್ಪ್ರೆಸ್ ಮಾಡಬೇಕು ಅಂತ ಗೊತ್ತಾಗುತ್ತಿಲ್ಲ. ಬಹಳ ಬೇಸರವಾಯ್ತು. ನನ್ನ ಲೆಕ್ಕದಲ್ಲಿ ಮೂವರು ಇದ್ದಾರೆ. ಟಾಸ್ಕ್ ಅಂತ ಬಂದಾಗ ನೀವು ಸ್ಟ್ರಾಟಜಿ ಅಂತೀರಾ. ಆದರೆ ತಂತ್ರಗಾರಿಕೆ ಮಾಡಬೇಕು. ಆದರೆ ಕುತಂತ್ರ ಮಾಡಬೇಕು ಎಂದು ಎಲ್ಲಿಯೂ ಬರೆದಿಲ್ಲ. ಮೋಸದಾಟ ಮಾಡಬಾರದು ಎಂದು ಹೇಳಿ ನೇರವಾಗಿಯೇ ಮೂವರು ಕಿಡಿಕಾರಿದ್ದಾರೆ.
ಅಂತಿಮವಾಗಿ ನಿಧಿ ಸುಬ್ಬಯ್ಯ ಮತ್ತು ಪ್ರಶಾಂತ್ ಸಂಬರಗಿ ಪರವಾಗಿ 5 ವೋಟುಗಳು ಬಿದ್ದ ಹಿನ್ನೆಲೆಯಲ್ಲಿ ನಾಯಕನ ವಿಶೇಷ ಅಧಿಕಾರ ಚಲಾಯಿಸಿದ ಅರವಿಂದ್ ನಿಧಿ ಅವರನ್ನು ‘ಕಳಪೆ’ಗೆ ಆಯ್ಕೆ ಮಾಡಿದರು. ಉತ್ತಮ ಪತ್ರಗಳನ್ನು ಬರೆದ ಚಕ್ರವರ್ತಿ ಚಂದ್ರಚೂಡ್ ಅವರನ್ನು ವಾರದ ‘ಅತ್ಯುತ್ತಮ’ ಆಟಗಾರನಾಗಿ ಮನೆಯ ಸದಸ್ಯರು ಆಯ್ಕೆ ಮಾಡಿದರು.
ನಾನು ಫೇಲಾಗಿದ್ದೇನೆ.. ನಮ್ಮ ಆರೋಗ್ಯ ವ್ಯವಸ್ಥೆಯೂ ಹಾಳಾಗಿದೆ… ಸೋನು ಸೂದ್