ಮನುಷ್ಯ ರೂಪದ ರಾಕ್ಷಸ…. ನಾಯಿಯನ್ನ ಬೈಕ್ ಕಟ್ಟಿ ಎಲೆದು ಚಿತ್ರಹಿಂಸೆ..!
ಮಂಗಳೂರು : ಮನುಷ್ಯ ರೂಪದ ರಾಕ್ಷಸ ಮುಗ್ಧ ಪ್ರಾಣಿಯ ಮೇಲೆ ತನ್ನ ಕ್ರೌರ್ಯ ಮೆರೆದಿದ್ದಾನೆ. ನಾಯಿಯನ್ನ ಬೈಕ್ ಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದ ಹೇಯ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು, ಪ್ರಕರಣದ ಆರೋಪಿಯ ಗುರುತು ಈಗಾಗಲೇ ಪತ್ತೆಯಾಗಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.
ಏಪ್ರಿಲ್15ರಂದು ಘಟನೆ ನಡೆದಿದೆ ಎನ್ನಲಾಗಿದ್ದು ಮುಕ್ಕದ ಓIಖಿಏ ಬಳಿ ಇಬ್ಬರು ಬೈಕ್ ನಲ್ಲಿ ನಾಯಿಯನ್ನು ಎಳೆದೊಯ್ದಿದ್ದಾರೆ. ಈ ಕುರಿತಾದ ಫೋಟೋಗಳು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ನೀಚರ ವಿರುದ್ಧ ನೆಟ್ಟಿಗರ ಆಕ್ರೋಶ ಕಟ್ಟೆ ಹೊಡೆದಿದೆ.
ಮಂಗಳೂರಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗಿದ್ದು, ನಾಯಿ ಹಿಂಸಿಸಿದವರಿಗೆ ಕಠಿಣ ಶಿಕ್ಷೆ ನೀಡಬೇಕೆಂಬ ಒತ್ತಾಯ ಕೇಳಿ ಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಿವಕುಮಾರ್, ಸುರತ್ಕಲ್ ಠಾಣೆಯಲ್ಲಿ ಈಗಾಗಲೇ ದೂರು ದಾಖಲಾಗಿದೆ. ಆರೋಪಿಗಳ ಗುರುತು ಕೂಡಾ ಪತ್ತೆಯಾಗಿದೆ. ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದ್ದಾರೆ.
ಮದುವೆಯಾಗು ಎಂದು ಮನೆಗೆ ನುಗ್ಗಿದ್ದ ಯುವತಿಯನ್ನ ಕೊಲೆಗೈದ ಪ್ರಿಯಕರ