ಡ್ರೈವಿಂಗ್ ಲೈಸೆನ್ಸ್ ಮೊಬೈಲ್ ಫೋನ್ ನಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ ?
ನಿಮಗೆ ಆಗಾಗ್ಗೆ ಡ್ರೈವಿಂಗ್ ಲೈಸೆನ್ಸ್ ಅನ್ನು ಮನೆಯಲ್ಲಿಯೇ ಮರೆಯುವ ಅಭ್ಯಾಸವಿದ್ದರೆ, ನೀವು ನಿಮ್ಮ ಪರವಾನಗಿಯನ್ನು ಡಿಜಿಲಾಕರ್ ಅಥವಾ ಎಂಪರಿವಾಹನ್ ಅಪ್ಲಿಕೇಶನ್‌ನಲ್ಲಿ ಇರಿಸಿಕೊಳ್ಳಬಹುದು ಮತ್ತು ಫೋನ್ ನಲ್ಲಿ ಡೌನ್‌ಲೋಡ್ ಮಾಡಬಹುದು. ಇದರಿಂದಾಗಿ ನಿಮಗೆ ಬೇಕಾದಲ್ಲೆಲ್ಲಾ ಡ್ರೈವಿಂಗ್ ಲೈಸೆನ್ಸ್ ತೋರಿಸಬಹುದು.
ವಾಸ್ತವವಾಗಿ, ನಿಮ್ಮ ದಾಖಲೆಗಳು ಅಥವಾ ಡ್ರೈವಿಂಗ್ ಲೈಸೆನ್ಸ್ ಅನ್ನು ಡಿಜಿಲಾಕರ್ ಅಥವಾ ಎಂಪರಿವಾಹನ್ ಅಪ್ಲಿಕೇಶನ್‌ನಲ್ಲಿ ಇರಿಸಿದರೆ ಅದು ನಿಮಗೆ ಹಾರ್ಡ್ ಕಾಪಿ ಇಲ್ಲದಿದ್ದ ಪರಿಸ್ಥಿತಿಯಲ್ಲಿ ಹೆಚ್ಚು ಉಪಯುಕ್ತವಾಗಿದೆ. ನೀವು ಮನೆಯಲ್ಲಿ ಡ್ರೈವಿಂಗ್ ಲೈಸೆನ್ಸ್ ಮರೆತಾಗ, ಅಂತಹ ಸಂದರ್ಭದಲ್ಲಿ, ಸ್ಮಾರ್ಟ್ಫೋನ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್ ಅನ್ನು ತೋರಿಸುವ ಮೂಲಕ ಚಲನ್ ಪಡೆಯುವುದನ್ನು ತಪ್ಪಿಸಬಹುದು.
2018 ರ ಅಧಿಕೃತ ನಿಯಮಗಳ ಪ್ರಕಾರ, ನಿಮ್ಮ ಡ್ರೈವಿಂಗ್ ಲೈಸೆನ್ಸ್ ಡಿಜಿಲಾಕರ್ ಅಥವಾ ಎಂಪರಿವಾಹನ್ ಅಪ್ಲಿಕೇಶನ್ ನಲ್ಲಿ ಇಟ್ಟುಕೊಂಡಿದ್ದರೆ, ನೀವು ಡ್ರೈವಿಂಗ್ ಲೈಸೆನ್ಸ್ ನ ಪೇಪರ್ ಕಾಪಿಗಳನ್ನು ಇಟ್ಟು ಕೊಳ್ಳುವ ಅಗತ್ಯವಿಲ್ಲ. ಜೊತೆಗೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಅನ್ನು ಕಳೆದುಕೊಳ್ಳುವ ಭಯವೂ ಇಲ್ಲ.
ನಿಮ್ಮ ಡ್ರೈವಿಂಗ್ ಲೈಸೆನ್ಸ್ ಅನ್ನು ನೀವು ಫೋನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಅಗತ್ಯವಿದ್ದಾಗ ಸಂಚಾರಿ ಪೊಲೀಸರಿಗೆ ತೋರಿಸಬಹುದು.
ಅದಕ್ಕಾಗಿ ನೀವು ಈ ಹಂತಗಳನ್ನು ಅನುಸರಿಸಬೇಕು.
ಮೊದಲನೆಯದಾಗಿ, ನೀವು ಡಿಜಿಲಾಕರ್‌ನಲ್ಲಿ ಖಾತೆಯನ್ನು ಹೊಂದಿರಬೇಕು.
ನಿಮ್ಮ ಖಾತೆ ಡಿಜಿಲಾಕರ್‌ನಲ್ಲಿ ಇಲ್ಲದಿದ್ದರೆ ನೀವು ಇದಕ್ಕಾಗಿ ಆಧಾರ್ ಕಾರ್ಡ್‌ನೊಂದಿಗೆ ಸೈನ್ ಅಪ್ ಮಾಡಬಹುದು.
ಇದಕ್ಕಾಗಿ ನಿಮಗೆ ಫೋನ್ ಸಂಖ್ಯೆಯು ಬೇಕಾಗುತ್ತದೆ.
ಡಿಜಿಲಾಕರ್ಗೆ ಸೈನ್ ಇನ್ ಮಾಡಿದ ನಂತರ, ನೀವು ಚಾಲನಾ ಪರವಾನಗಿಯನ್ನು ಸರ್ಚ್ ಪಟ್ಟಿಯಲ್ಲಿ ನಮೂದಿಸಬೇಕಾಗುತ್ತದೆ.
ಇಲ್ಲಿ ನೀವು ಚಾಲನಾ ಪರವಾನಗಿ(ಡ್ರೈವಿಂಗ್ ಲೈಸೆನ್ಸ್) ಪಡೆದ ರಾಜ್ಯವನ್ನು ಆರಿಸಬೇಕಾಗುತ್ತದೆ. ನೀವು ಆಲ್ ಸ್ಟೇಟ್ ಅನ್ನು ಸಹ ಆಯ್ಕೆ ಮಾಡಬಹುದು.
ಈಗ ನೀವು ನಿಮ್ಮ ಚಾಲನಾ ಪರವಾನಗಿ ಸಂಖ್ಯೆಯನ್ನು ನಮೂದಿಸಬೇಕು.
ನಂತರ ಗೆಟ್ ಡಾಕ್ಯುಮೆಂಟ್ ಬಟನ್ ಕ್ಲಿಕ್ ಮಾಡಿ.
ಈಗ ನೀವು ಡಿಜಿಲಾಕರ್‌ನ ವಿತರಿಸಿದ ದಾಖಲೆಗಳ ಪಟ್ಟಿಗೆ ಹೋಗುವ ಮೂಲಕ ನಿಮ್ಮ ಚಾಲನಾ ಪರವಾನಗಿಯನ್ನು ಡೌನ್‌ಲೋಡ್ ಮಾಡಬಹುದು ಅಥವಾ ವೀಕ್ಷಿಸಬಹುದು.
ಡಿಜಿಲಾಕರ್ ಬದಲಿಗೆ ನೀವು mParivahan ಅಪ್ಲಿಕೇಶನ್ ಅನ್ನು ಸಹ ಬಳಸಬಹುದು.
ಈಗ ಯಾವುದೇ ಸಂದರ್ಭದಲ್ಲಿ, ನಿಮ್ಮ ಫೋನ್‌ನಲ್ಲಿ ಚಾಲನಾ ಪರವಾನಗಿಯನ್ನು ಡೌನ್‌ಲೋಡ್ ಮಾಡಬಹುದು.
ಆರೋಗ್ಯಕರ ಶಕ್ತಿಯುತ ಲಿವರ್/ಶ್ವಾಸಕೋಶಕ್ಕಾಗಿ ಮನೆಮದ್ದುಗಳು#Saakshatv #healthtips #Homeremedies https://t.co/N9Q4oC4hwR
— Saaksha TV (@SaakshaTv) April 20, 2021
ದರ್ಶನ್ ಮೇಲೆ ನಾನು ಬಹಳ ಕ್ರಶ್ ಹೊಂದಿದ್ದೇನೆ – ನಟಿ ಗಾಯತ್ರಿ ಐಯ್ಯರ್#Darshan #VinodhPrabhakar #gayathri #sandalwood https://t.co/ovvgICjjcW
— Saaksha TV (@SaakshaTv) April 20, 2021
ಬಿರುಬಿಸಿಲಿಗೆ ಚಾಕಲೇಟ್ ಮಿಲ್ಕ್ ಶೇಕ್#Saakshatv #cookingrecipe #chocolate #milkshake https://t.co/JCAQoyp8GI
— Saaksha TV (@SaakshaTv) April 20, 2021
ಕೋವಿಡ್ -19 ಎರಡನೇ ಅಲೆ ಪ್ರಕರಣಗಳು ಭಾರತದಲ್ಲಿ ಎಷ್ಟು ಸಮಯದ ಬಳಿಕ ಇಳಿಮುಖ ಕಾಣಲಿದೆ ?#covid19 #secondwave https://t.co/ViqnbxhzTN
— Saaksha TV (@SaakshaTv) April 20, 2021
#download #drivinglicense #mobilephone