ಕೊರೊನಾ corona ಸ್ಫೋಟ : ಬೆಂಗಳೂರಲ್ಲಿ ಇಂದು 17,597 ಮಂದಿಗೆ ಸೋಂಕು
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸ್ಫೋಟ ಮುಂದುವರೆದಿದೆ. ಇಂದು ನಗರದಲ್ಲಿ 17,597 ಜನರಲ್ಲಿ ಕೋವಿಡ್ ಸೋಂಕು ಹರಡಿರುವುದು ದೃಢಪಟ್ಟಿದೆ. ಇದರೊಂದಿಗೆ ನಗರದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,49,624 ಕ್ಕೆ ಏರಿಕೆಯಾಗಿದೆ.
ಇಂದು ದಕ್ಷಿಣ 3,190, ಪಶ್ಚಿಮ ವಲಯ 2,313, ಬೊಮ್ಮನಹಳ್ಳಿಯಲ್ಲಿ 1835, ದಾಸರಹಳ್ಳಿಯಲ್ಲಿ 473, ಪೂರ್ವ ವಲಯದಲ್ಲಿ 2,073, ಮಹದೇವಪುರ 1,682, ಆರ್ ಆರ್ ನಗರ 1275, ಯಲಹಂಕ 1,139 ಕೇಸ್ ಗಳು ದೃಢಪಟ್ಟಿವೆ.
ಇನ್ನು ನಗರದ ಹೊರವಲಯದಲ್ಲೂ ಕೊರೊನಾ ಅಬ್ಬರ ಮುಂದುವರೆದಿದ್ದು, ಇಂದು 1,646 ಪ್ರಕರಣ ಕಂಡುಬಂದಿದ್ದು, ದಕ್ಷಿಣ ತಾಲೂಕು 410, ಉತ್ತರ ತಾಲೂಕು 261, ಪೂರ್ವ ತಾಲೂಕು 160, ಆನೇಕಲ್ 510 ಜನರಿಗೆ ಸೋಂಕು ವಕ್ಕರಿಸಿದೆ.










