ಕೊರೊನಾ ಸಮರದಲ್ಲಿ ಭಾರತದ ಜೊತೆ ನಾವಿದ್ದೇವೆ : ಪಾಕ್ ಪ್ರಧಾನಿ ಇಮ್ರಾನ್ ಖಾನ್
ಪಾಕಿಸ್ತಾನ : #indianeedsoxygen, #westandwithindia, #pakistanstandwithindia ಪಾಕಿಸ್ತಾನದಲ್ಲಿ ಟ್ವಿಟ್ಟರ್ ನಲ್ಲಿ ಈ ಹ್ಯಾಶ್ ಟ್ಯಾಗ್ ಗಳೇ ಟ್ರೆಂಡ್ ಆಗ್ತಿವೆ. ಇದಕ್ಕೆ ಕಾರಣ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಾಡಿರುವ ಆ ಒಂದು ಟ್ವೀಟ್..
ಹೌದು… ಇಡೀ ಬಾರತದಲ್ಲಿ ಕೊರೊನಾ ರಣಕೇಕೆಯಿಟ್ಟಿದ್ದು, 2ನೇ ಅಲೆಯಲ್ಲಿ ಸಾವು ನೋವಿನ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ ಆಕ್ಸಿಜನ್ ಸಿಗದೇ ಎಷ್ಟೋ ಕಡೆಗಳಲ್ಲಿ ನರಳಿ ನರಳಿ ಸಾಯುತ್ತಿದ್ದಾರೆ. ಈ ನಡುವೆ ಭಾರತದ ಬದ್ಧ ವೈರಿ ದೇಶ ಪಾಕಿಸ್ತಾನವು ಕೊರೊನಾ ವಿರುದ್ಧದ ಹೋರಾಟದಲ್ಲಿ ಬಾರತದ ಪರ ನಾವಿದ್ದೇವೆ ಎಂಬ ಸಂದೇಶವನ್ನ ರವಾನಿಸಿ ವಿಶ್ವದ ಕಣ್ಣಲ್ಲಿ ಮಹಾನ್ ಆಗಿದೆ.
ಪ್ರಧಾನಿ ಇಮ್ರಾನ್‌ಖಾನ್‌ಕೋವಿಡ್‌ವಿರುದ್ಧದ ಹೋರಾಟದಲ್ಲಿ ಭಾರತೀಯರೊಂದಿಗೆ ನಾವಿದ್ದೇವೆ ಎಂದು ಟ್ವೀಟ್‌ಮಾಡಿದ್ದಾರೆ. ತಮ್ಮ ಅಧಿಕೃತ ಖಾತೆಯಲ್ಲಿ ಟ್ವೀಟ್ಮಾಡಿದ ಅವರು, “ಅಪಾಯಕಾರಿ ಕೋವಿಡ್-19 ವಿರುದ್ಧ ಹೋರಾಟ ನಡೆಸುತ್ತಿರುವ ಭಾರತದ ಜನರೊಂದಿಗೆ ನಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ.
ನಮ್ಮ ನೆರೆಯ ದೇಶ ಮತ್ತು ಇಡೀ ಜಗತ್ತಿನಲ್ಲಿ ಕೋವಿಡ್ಸಾಂಕ್ರಾಮಿಕದಿಂದ ಬಳಲುತ್ತಿರುವವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಮಾನವೀಯತೆಯು ಎದುರಿಸುತ್ತಿರುವ ಈ ಜಾಗತಿಕ ಸವಾಲಿನ ವಿರುದ್ಧ ನಾವು ಒಂದಾಗಿ ಹೋರಾಡಬೇಕು” ಎಂದಿದ್ದಾರೆ. ಇದೇ ಕಾರಣದಿಂದಾಗಿ ಪಾಕಿಸ್ತಾನದಲ್ಲಿ ಈ ರೀತಿಯಾದ ಹ್ಯಾಶ್ ಟ್ಯಾಗ್ ಗಳು ಟ್ರೆಂಡಿಂಗ್ ನಲ್ಲಿವೆ.