ADVERTISEMENT
Saturday, October 10, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮೇ 1 ರಿಂದ ಕೋವಿಡ್-19 ವ್ಯಾಕ್ಸಿನೇಷನ್‌ 3ನೇ ಡ್ರೈವ್ – ಯಾವ್ಯಾವ ಲಸಿಕೆಗಳು ಲಭ್ಯ? ದರವೆಷ್ಟು ? ಯಾವುದು ಸುರಕ್ಷಿತ ? – ಸಂಪೂರ್ಣ ಮಾಹಿತಿ ಇಲ್ಲಿದೆ

Shwetha by Shwetha
April 24, 2021
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Covid19 vaccination drive
Share on FacebookShare on TwitterShare on WhatsappShare on Telegram

ಮೇ 1 ರಿಂದ ಕೋವಿಡ್-19 ವ್ಯಾಕ್ಸಿನೇಷನ್‌ 3ನೇ ಡ್ರೈವ್ – ಯಾವ್ಯಾವ ಲಸಿಕೆಗಳು ಲಭ್ಯ? ದರವೆಷ್ಟು ? ಯಾವುದು ಸುರಕ್ಷಿತ ? – ಸಂಪೂರ್ಣ ಮಾಹಿತಿ ಇಲ್ಲಿದೆ

ಭಾರತದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ತೀವ್ರಗತಿಯಲ್ಲಿ ಹರಡುತ್ತಿದೆ. ಹಿಂದಿನ ಅಲೆಗೆ ಹೋಲಿಸಿದರೆ ಇಂದು ಪರಿಸ್ಥಿತಿ ಹೆಚ್ಚು ಗಂಭೀರವಾಗಿದೆ.
Covid19 vaccination drive

Related posts

ಗೃಹಲಕ್ಷ್ಮೀಯರ ಮನೆಬಾಗಿಲಿಗೆ ಬರಲಿದೆ ಮರುಪರಿಶೀಲನೆಯ ಬಿಸಿ ಬ್ಯಾಂಕ್ ಖಾತೆ ಮತ್ತು ಆಧಾರ್ ಜೋಡಣೆಯಲ್ಲಿ ಸಣ್ಣ ತಪ್ಪಾದರೂ ಎರಡು ಸಾವಿರಕ್ಕೆ ಬೀಳಲಿದೆ ಕತ್ತರಿ

ಗೃಹಲಕ್ಷ್ಮೀಯರ ಮನೆಬಾಗಿಲಿಗೆ ಬರಲಿದೆ ಮರುಪರಿಶೀಲನೆಯ ಬಿಸಿ ಬ್ಯಾಂಕ್ ಖಾತೆ ಮತ್ತು ಆಧಾರ್ ಜೋಡಣೆಯಲ್ಲಿ ಸಣ್ಣ ತಪ್ಪಾದರೂ ಎರಡು ಸಾವಿರಕ್ಕೆ ಬೀಳಲಿದೆ ಕತ್ತರಿ

October 10, 2026
ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ಮತ್ತೆ ಸಂಕಷ್ಟ; ಸುಪ್ರೀಂನಿಂದ ನೋಟಿಸ್ ಜಾರಿ

ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ಮತ್ತೆ ಸಂಕಷ್ಟ; ಸುಪ್ರೀಂನಿಂದ ನೋಟಿಸ್ ಜಾರಿ

October 10, 2026

ಮಾಸ್ಕ್ ಧರಿಸದೆ ಇರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಈ ವೈರಲ್ ಸೋಂಕು ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ. ಈಗ ಸೋಂಕು ನಿಯಂತ್ರಣಕ್ಕೆ ಅದೆಷ್ಟೇ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಕೂಡ ಪರಿಸ್ಥಿತಿ ನಿಯಂತ್ರಣಕ್ಕೆ ಸಿಗುತ್ತಿಲ್ಲ. ದೇಶದಲ್ಲಿ ಕೋವಿಡ್ ಸಕ್ರಿಯ ಕೇಸ್ ಗಳು ತೀವ್ರವಾಗಿ ಏರಿಕೆಯಾಗುತ್ತಿದ್ದು, ಇದೀಗ ಬೆಂಗಳೂರಿನಲ್ಲಿ 1,49,624 ಸಕ್ರಿಯ ಪ್ರಕರಣಗಳು ದಾಖಲಾಗಿದೆ.

ಕರ್ನಾಟಕದಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆ 17 ಸಾವಿರಕ್ಕೂ ಹೆಚ್ಚು ‌ವರದಿಯಾಗುತ್ತಿದ್ದರೆ, ಸಿಲಿಕಾನ್ ಸಿಟಿ ಬೆಂಗಳೂರು ಒಂದರಲ್ಲೇ ದಿನಕ್ಕೆ 15 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದೆ. ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳ ಪರಿಣಾಮ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ, ಆಮ್ಲಜನಕದ ಕೊರತೆ, ಕೊರೋನಾ ಚಿಕಿತ್ಸೆಗೆ ಸಂಬಂಧಿಸಿದ ರೆಮ್ಡೆಸಿವಿರ್ ಔಷಧಿಯ ಕೊರತೆ ಉಂಟಾಗುತ್ತಿದೆ. ಕೊರೋನಾ ತಡೆಗಟ್ಟುವ ಸಲುವಾಗಿ ಈಗಾಗಲೇ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ, ವೀಕ್ ಎಂಡ್ ಕರ್ಫ್ಯೂ ಜಾರಿಗೊಳಿಸಿದ್ದರೆ, ಕೇಂದ್ರ ಸರ್ಕಾರ‌ ಮೇ 1 ರಿಂದ ಕೋವಿಡ್-19 ವ್ಯಾಕ್ಸಿನೇಷನ್‌ನ 3 ನೇ ಹಂತದ ಡ್ರೈವ್ ಅನ್ನು ಪ್ರಾರಂಭಿಸಿದೆ. ಮೂರನೇ ಹಂತದ ವ್ಯಾಕ್ಸಿನೇಷನ್‌ನಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರೂ ಕೋವಿಡ್ -19 ಲಸಿಕೆ ಪಡೆಯಲು ಅರ್ಹರಾಗಿದ್ದಾರೆ. ಈ ಸಾಂಕ್ರಾಮಿಕ ರೋಗವನ್ನು ಸೋಲಿಸಲು ಲಸಿಕೆ ಬಹಳ ಮುಖ್ಯವಾದ ಆಯುಧವಾಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

https://www.youtube.com/watch?v=nTkba6hlP1A

ಕೋವಿಡ್-19 ವ್ಯಾಕ್ಸಿನೇಷನ್‌ನ ಮೊದಲ ಹಂತದಲ್ಲಿ, 60 ವರ್ಷ ಮೇಲ್ಪಟ್ಟವರಿಗೆ ಮತ್ತು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ 45 ವರ್ಷ ಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ಲಸಿಕೆಯನ್ನು ನೀಡಲಾಯಿತು. ನಂತರ ಎರಡನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆಯನ್ನು ನೀಡಲಾಗುತ್ತಿದೆ.

ಮುಂದಿನ ತಿಂಗಳು ಪ್ರಾರಂಭವಾಗುವ ವ್ಯಾಕ್ಸಿನೇಷನ್ ಡ್ರೈವ್‌ನ ಮೂರನೇ ಹಂತದ ಅಡಿಯಲ್ಲಿ, ತಯಾರಕರು ರಾಜ್ಯ ಸರ್ಕಾರಗಳಿಗೆ ಮತ್ತು ಮುಕ್ತ ಮಾರುಕಟ್ಟೆಯಲ್ಲಿ 50 ಪ್ರತಿಶತದಷ್ಟು ಪ್ರಮಾಣವನ್ನು ಪೂರೈಸಲು ಮುಕ್ತರಾಗಿರುತ್ತಾರೆ. ಖಾಸಗಿ ಆಸ್ಪತ್ರೆಗಳು ಮತ್ತು ರಾಜ್ಯಗಳಿಗೆ ನೇರವಾಗಿ ಉತ್ಪಾದಕರಿಂದ ಡೋಸೇಜ್ ಖರೀದಿಸಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ.

ಪ್ರಸ್ತುತ ಲಭ್ಯವಿರುವ ಕೋವಿಡ್-19 ಲಸಿಕೆಗಳ ಬಗೆಗಿನ ವಿವರಗಳು ಇಲ್ಲಿದೆ
Covishield

ಕೋವಿಶೀಲ್ಡ್

ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಅಸ್ಟ್ರಾಜೆನೆಕಾ-ಆಕ್ಸ್‌ಫರ್ಡ್ ಯೂನಿವರ್ಸಿಟಿ ಲಸಿಕೆಯಾದ ಕೋವಿಶೀಲ್ಡ್ ಅಡೆನೊವೈರಸ್ ವೆಕ್ಟರ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.

ಸುರಕ್ಷತೆ: ಕೋವಿಶೀಲ್ಡ್ ಸುರಕ್ಷಿತ ಲಸಿಕೆಯಾಗಿದ್ದು, ಹೆಚ್ಚಾಗಿ ಸೌಮ್ಯದಿಂದ ಮಧ್ಯಮ ಅಡ್ಡಪರಿಣಾಮಗಳನ್ನು ಹೊಂದಿರುತ್ತದೆ. ಕೋವಿಶೀಲ್ಡ್ ಅಪರೂಪದ ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಿದೆ. ಆದರೆ ಲಸಿಕೆಯನ್ನು ಬಳಸುವುದರಿಂದ ಸಿಗುವ ಪ್ರಯೋಜನಗಳು ಅಪಾಯಗಳನ್ನು ಮೀರಿಸುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮತ್ತು ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ (ಇಎಂಎ) ಹೇಳಿವೆ.

ಇದು ಪ್ರಸ್ತುತ ಪ್ರತಿ ಡೋಸ್‌ಗೆ 150 ರೂ.ಗೆ ಮಾರಾಟವಾಗುತ್ತಿದ್ದು, ಖಾಸಗಿ ಮಾರುಕಟ್ಟೆಯಲ್ಲಿನ ಬೆಲೆ ಪ್ರತಿ ಡೋಸ್‌ಗೆ 1,000 ರೂ ಆಗಿದೆ

ಕೋವಾಕ್ಸಿನ್ : ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ) – ಪುಣೆ ಒದಗಿಸಿದ SARS-ಕೋವಿ -2 ಸ್ಟ್ರೈನ್ ಆಧರಿಸಿ ಈ ಲಸಿಕೆಯನ್ನು ಮೇಡ್ ಇನ್ ಇಂಡಿಯಾ ಅಡಿಯಲ್ಲಿ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದೆ.
ಸುರಕ್ಷತೆ: ಕೊವಾಕ್ಸಿನ್ ಹೆಚ್ಚಾಗಿ ಲಘುವಿನಿಂದ ಮಧ್ಯಮ ಅಡ್ಡಪರಿಣಾಮಗಳನ್ನು ಹೊಂದಿರುವ ಸುರಕ್ಷಿತ ಲಸಿಕೆ. ಎರಡು ಡೋಸ್‌ಗಳ ನಡುವಿನ ನಾಲ್ಕು ವಾರಗಳ ನಂತರ 81 ಪ್ರತಿಶತದಷ್ಟು ಪರಿಣಾಮಕಾರಿತ್ವವನ್ನು ಸೂಚಿಸುತ್ತದೆ. ಭಾರತದಲ್ಲಿ ಇದು ಲಭ್ಯವಿದ್ದು, ಭಾರತದಲ್ಲೆ ಇದನ್ನು ತಯಾರಿಸಲಾಗುತ್ತಿದೆ.
ಪ್ರಸ್ತುತ ಸರ್ಕಾರಕ್ಕೆ ಪ್ರತಿ ಡೋಸ್‌ಗೆ 150 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಖಾಸಗಿ ಮಾರುಕಟ್ಟೆಯಲ್ಲಿನ ಬೆಲೆ ತಿಳಿದಿಲ್ಲ.

ಸ್ಪುಟ್ನಿಕ್ ವಿ : ಸ್ಪುಟ್ನಿಕ್ ವಿ ಲಸಿಕೆಯನ್ನು ರಷ್ಯಾದ ಗೇಮ್‌ಲ್ಯ ಕೇಂದ್ರ ಮತ್ತು ರಷ್ಯಾದ ಸರ್ಕಾರಿ ಸವರಿನ್ ವೆಲ್ತ್ ಫಂಡ್ ಅಭಿವೃದ್ಧಿಪಡಿಸಿದೆ.
ಸುರಕ್ಷತೆ: ರಷ್ಯಾ ಮತ್ತು ಇತರ ದೇಶಗಳಲ್ಲಿ ಸ್ಪುಟ್ನಿಕ್ ವಿ ಅಪ್ಡೇಟ್ ಲಸಿಕೆ ಹೆಚ್ಚಾಗಿ ಸುರಕ್ಷಿತವಾಗಿದ್ದು, ಲಘುವಿನಿಂದ ಮಧ್ಯಮ ಅಡ್ಡಪರಿಣಾಮಗಳು ಕಾಣಿಸಿಕೊಂಡಿದೆ.
ಸುರಕ್ಷತೆ: ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ವಿವರಗಳಿಂದ ತಿಳಿದುಬಂದಿರುವ ಪ್ರಕಾರ ಸ್ಪುಟ್ನಿಕ್ ವಿ ಡೇಟಾವು 91.6 ಪ್ರತಿಶತದಷ್ಟು ಪರಿಣಾಮಕಾರಿತ್ವವನ್ನು ಸೂಚಿಸುತ್ತದೆ. ಲಭ್ಯತೆ: ಭಾರತದಲ್ಲಿ ಇದಕ್ಕೆ ಅನುಮೋದನೆ ದೊರಕಿದ್ದು ಮೇ ತಿಂಗಳಿನಿಂದ ಲಭ್ಯವಾಗುವ ನಿರೀಕ್ಷೆಯಿದೆ.
ಬೆಲೆ: ಒಂದು ಡೋಸ್‌ನ ಸೂಚಿಸಲಾದ ಬೆಲೆ ಪ್ರತಿ ಡೋಸ್‌ಗೆ $ 10 ಅಥವಾ 750 ರೂ

ಜಾನ್ಸನ್ & ಜಾನ್ಸನ್ : ಜೆ & ಜೆ ಲಸಿಕೆ ಅಡೆನೊವೈರಸ್ ವೆಕ್ಟರ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.
ಸುರಕ್ಷತೆ: ಜೆ & ಜೆ ಸುರಕ್ಷಿತ ಲಸಿಕೆಯಾಗಿದ್ದು, ಇದು ಲಘುವಿನಿಂದ ಮಧ್ಯಮ ಅಡ್ಡಪರಿಣಾಮಗಳನ್ನು ಹೊಂದಿರುತ್ತದೆ. ಯುಎಸ್ ಲ್ಲಿ ಅಪರೂಪದ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಗಳು ವರದಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ತನಿಖೆ ಮಾಡಲಾಗುತ್ತಿದೆ. :
ಜೆ & ಜೆ ಕೋವಿಡ್ -19 ಲಸಿಕೆ ಒಂದೇ ಡೋಸ್ ಸಾಕಾಗುತ್ತದೆ.‌ ಭಾರತದಲ್ಲಿ ಇದಕ್ಕೆ ಅನುಮೋದನೆ ಇಲ್ಲ.
ಬೆಲೆ: ಜೆ & ಜೆ ಲಸಿಕೆ ಪ್ರತಿ ಡೋಸ್‌ಗೆ $ 10 ಬೆಲೆಯಿರುತ್ತದೆ.
Covid19 vaccination drive

ಫಿಜರ್-ಬಯೋಟೆಕ್ಪ್ಲ್ಯಾಟ್‌ಫಾರ್ಮ್: ಫಿಜರ್ ಲಸಿಕೆ ಜೆನೆಟಿಕ್ ಮೆಟೀರಿಯಲ್ ಅಥವಾ ಎಂಆರ್‌ಎನ್‌ಎ ಆಧರಿಸಿದೆ.
ಸುರಕ್ಷತೆ: ಇದು ಹೆಚ್ಚಾಗಿ ಲಘುವಿನಿಂದ ಮಧ್ಯಮ ಅಡ್ಡಪರಿಣಾಮಗಳನ್ನು ಹೊಂದಿರುವ ಸುರಕ್ಷಿತ ಲಸಿಕೆ. ಫಿಜರ್ ಲಸಿಕೆ ಎರಡನೇ ಡೋಸ್ ನಂತರ 95 ಪ್ರತಿಶತದಷ್ಟು ಪರಿಣಾಮಕಾರಿತ್ವವನ್ನು ಹೊಂದಿದೆ.

ಲಭ್ಯತೆ: ಭಾರತದಲ್ಲಿ ಅನುಮೋದನೆ ಇಲ್ಲ.
ಬೆಲೆ: ಲಸಿಕೆಯನ್ನು ಪ್ರತಿ ಡೋಸ್‌ಗೆ $19.5 ಎಂದು ನಿಗದಿಪಡಿಸಲಾಗಿದೆ. ಇದು ದಕ್ಷಿಣ ಆಫ್ರಿಕಾದಲ್ಲಿ ಪ್ರತಿ ಡೋಸ್‌ಗೆ $10 ದರದಲ್ಲಿ ಲಭ್ಯವಿದೆ.

ಮಾಡರ್ನಾ ಪ್ಲ್ಯಾಟ್‌ಫಾರ್ಮ್: ಮಾಡರ್ನಾ ಕೋವಿಡ್ -19 ಲಸಿಕೆ ಜೆನೆಟಿಕ್ ಮೆಟೀರಿಯಲ್ ಅಥವಾ ಎಂಆರ್‌ಎನ್‌ಎ ಆಧರಿಸಿದೆ.
ಸುರಕ್ಷತೆ: ಇದು ಹೆಚ್ಚಾಗಿ ಸೌಮ್ಯದಿಂದ ಮಧ್ಯಮ ಅಡ್ಡಪರಿಣಾಮಗಳನ್ನು ಹೊಂದಿರುವ ಸುರಕ್ಷಿತ ಲಸಿಕೆ. ಮಾಡರ್ನಾ ಲಸಿಕೆ ಎರಡನೇ ಡೋಸ್ ನಂತರ ಶೇಕಡಾ 94 ರಷ್ಟು ಪರಿಣಾಮಕಾರಿತ್ವವನ್ನು ಹೊಂದಿದೆ. ಲಭ್ಯತೆ: ಭಾರತದಲ್ಲಿ ಅನುಮೋದನೆ ಇಲ್ಲ.
ಲಸಿಕೆಗೆ ಯುಎಸ್‌ನಲ್ಲಿ ಪ್ರತಿ ಡೋಸ್‌ಗೆ $ 15 ಬೆಲೆಯಿರುತ್ತದೆ.

ಕೊರೋನಾ ವ್ಯಾಕ್ಸಿನೇಷನ್ ಕೊರೋನಾ ಸಂಬಂಧಿತ ಮರಣ ಪ್ರಮಾಣವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ನಮ್ಮ ದೇಹದಲ್ಲಿ ಕೋವಿಡ್ ವೈರಸ್ ತಡೆಗಟ್ಟಲು ಬೇಕಾದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವ್ಯಾಕ್ಸಿನೇಷನ್ ‌ಪಡೆದ ಬಳಿಕ ಕೂಡ ಸೋಂಕಿಗೆ ತುತ್ತಾಗುವ ಸಂಭವವಿದ್ದರೂ ಅಪಾಯದ ಪರಿಣಾಮ ಕಡಿಮೆ ಇರುತ್ತದೆ. ಆದುದರಿಂದ ವ್ಯಾಕ್ಸಿನೇಷನ್ ಪಡೆದ ಬಳಿಕವೂ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಕೈಗಳನ್ನು ಆಗಾಗ್ಗೆ ತೊಳೆದುಕೊಳ್ಳುವುದು, ಜನಸಂದಣಿಯಿಂದ ದೂರವಿರುವುದು ಅಗತ್ಯ.

#Covid19 #vaccinationdrive #covidvaccine

https://twitter.com/SaakshaTv/status/1384334046763708417?s=19

https://twitter.com/SaakshaTv/status/1384323065924841473?s=19

https://twitter.com/SaakshaTv/status/1384344248934297600?s=19

https://twitter.com/SaakshaTv/status/1384317466587721730?s=19

Tags: covid vaccinesCovid19 vaccination drive
ShareTweetSendShare
Join us on:

Related Posts

ಗೃಹಲಕ್ಷ್ಮೀಯರ ಮನೆಬಾಗಿಲಿಗೆ ಬರಲಿದೆ ಮರುಪರಿಶೀಲನೆಯ ಬಿಸಿ ಬ್ಯಾಂಕ್ ಖಾತೆ ಮತ್ತು ಆಧಾರ್ ಜೋಡಣೆಯಲ್ಲಿ ಸಣ್ಣ ತಪ್ಪಾದರೂ ಎರಡು ಸಾವಿರಕ್ಕೆ ಬೀಳಲಿದೆ ಕತ್ತರಿ

ಗೃಹಲಕ್ಷ್ಮೀಯರ ಮನೆಬಾಗಿಲಿಗೆ ಬರಲಿದೆ ಮರುಪರಿಶೀಲನೆಯ ಬಿಸಿ ಬ್ಯಾಂಕ್ ಖಾತೆ ಮತ್ತು ಆಧಾರ್ ಜೋಡಣೆಯಲ್ಲಿ ಸಣ್ಣ ತಪ್ಪಾದರೂ ಎರಡು ಸಾವಿರಕ್ಕೆ ಬೀಳಲಿದೆ ಕತ್ತರಿ

by Shwetha
October 10, 2026
0

ಬೆಂಗಳೂರು: ರಾಜ್ಯದ ಲಕ್ಷಾಂತರ ಮಹಿಳೆಯರ ಆರ್ಥಿಕ ಆಸರೆಯಾಗಿರುವ ಗೃಹಲಕ್ಷ್ಮಿ ಯೋಜನೆಗೆ ಈಗ ಹೊಸ ಕಟ್ಟುನಿಟ್ಟಿನ ನಿಯಮಗಳ ಕಾಲ ಎದುರಾಗಿದೆ. ಚುನಾವಣಾ ಅಖಾಡದಲ್ಲಿ ಹವಾ ಸೃಷ್ಟಿಸಿದ್ದ ಈ ಗ್ಯಾರಂಟಿ...

ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ಮತ್ತೆ ಸಂಕಷ್ಟ; ಸುಪ್ರೀಂನಿಂದ ನೋಟಿಸ್ ಜಾರಿ

ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ಮತ್ತೆ ಸಂಕಷ್ಟ; ಸುಪ್ರೀಂನಿಂದ ನೋಟಿಸ್ ಜಾರಿ

by Shwetha
October 10, 2026
0

ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಮತ್ತೆ ಕಾನೂನು ಸಂಕಷ್ಟ ಎದುರಾಗಿದೆ. ಅವರಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ...

ಅಮೆರಿಕದಲ್ಲಿ ಭಾರತೀಯ ಐಟಿ ಕಂಪನಿಗಳ ಹಿತ ಕಾಯಲು ಮೋದಿ ವಿಫಲ: ಟಿಸಿಎಸ್ ಮತ್ತು ಇನ್ಫೋಸಿಸ್ ಅಮಾನತು ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಅಮೆರಿಕದಲ್ಲಿ ಭಾರತೀಯ ಐಟಿ ಕಂಪನಿಗಳ ಹಿತ ಕಾಯಲು ಮೋದಿ ವಿಫಲ: ಟಿಸಿಎಸ್ ಮತ್ತು ಇನ್ಫೋಸಿಸ್ ಅಮಾನತು ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ವಾಗ್ದಾಳಿ

by Shwetha
October 10, 2026
0

ಬೆಂಗಳೂರು: ಅಮೆರಿಕ ಸರ್ಕಾರವು ಭಾರತದ ಪ್ರಮುಖ ಐಟಿ ದೈತ್ಯ ಕಂಪನಿಗಳಾದ ಟಿಸಿಎಸ್, ಇನ್ಫೋಸಿಸ್ ಮತ್ತು ವಿಪ್ರೋಗಳನ್ನು ಗ್ರೀನ್ ಕಾರ್ಡ್ ಪ್ರಾಯೋಜಕತ್ವದ ಕಾರ್ಯಕ್ರಮದಿಂದ ಅಮಾನತುಗೊಳಿಸಿರುವ ನಿರ್ಧಾರವು ಈಗ ಅಂತರಾಷ್ಟ್ರೀಯ...

ಮಹಿಷ ದಸರಾ ಆಚರಣೆಗೆ ನಿರ್ಬಂಧ: ಚಾಮುಂಡಿ ಬೆಟ್ಟದಲ್ಲಿ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

ಮಹಿಷ ದಸರಾ ಆಚರಣೆಗೆ ನಿರ್ಬಂಧ: ಚಾಮುಂಡಿ ಬೆಟ್ಟದಲ್ಲಿ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

by Shwetha
October 10, 2026
0

ಮಹಿಷ ದಸರಾ ಆಚರಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರ ಪ್ರತಿಮೆಯ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ....

ಅಮೆರಿಕದಲ್ಲಿ ಭಾರತೀಯ ಐಟಿ ದೈತ್ಯರಿಗೆ ಭಾರಿ ಆಘಾತ ಗ್ರೀನ್ ಕಾರ್ಡ್ ಯೋಜನೆಯಿಂದ ಇನ್ಫೋಸಿಸ್ ಟಿಸಿಎಸ್ ಮತ್ತು ವಿಪ್ರೋ ಅಮಾನತು

ಅಮೆರಿಕದಲ್ಲಿ ಭಾರತೀಯ ಐಟಿ ದೈತ್ಯರಿಗೆ ಭಾರಿ ಆಘಾತ ಗ್ರೀನ್ ಕಾರ್ಡ್ ಯೋಜನೆಯಿಂದ ಇನ್ಫೋಸಿಸ್ ಟಿಸಿಎಸ್ ಮತ್ತು ವಿಪ್ರೋ ಅಮಾನತು

by Shwetha
October 10, 2026
0

ವಾಷಿಂಗ್ಟನ್: ಅಮೆರಿಕದಲ್ಲಿ ನೆಲೆಸಿರುವ ಲಕ್ಷಾಂತರ ಭಾರತೀಯ ಐಟಿ ಉದ್ಯೋಗಿಗಳಿಗೆ ಮತ್ತು ಭಾರತದ ಪ್ರಮುಖ ತಂತ್ರಜ್ಞಾನ ಸಂಸ್ಥೆಗಳಿಗೆ ಅಮೆರಿಕ ಸರ್ಕಾರ ಅತಿ ದೊಡ್ಡ ಶಾಕ್ ನೀಡಿದೆ. ವಿದೇಶಿ ನೌಕರರಿಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram