RCB ಐಪಿಎಲ್ : ಕೊನೆ ಓವರ್ ನಲ್ಲಿ 37 ರನ್ ಚಚ್ಚಿದ ಜಡೇಜಾ
ಮುಂಬೈ : ಮುಂಬೈನ ವಾಂಖೇಡೆ ಸ್ಟೇಡಿಯಂನಲ್ಲಿ ರಾಕ್ ಸ್ಟಾರ್ ಸರ್ ಜಡೇಜಾ ಅಬ್ಬರಿಸಿದ್ದಾರೆ.
ಕೊನೆಯ ಓವರ್ ನಲ್ಲಿ ಬರೋಬ್ಬರಿ 37 ರನ್ ಚಚ್ಚಿ ಬೀಸಾಕಿದ್ದಾರೆ. ಹರ್ಷಲ್ ಪಟೇಲ್ ಎಸೆದ 20 ಓವರ್ ನಲ್ಲಿ ಜಡೇಜಾ 37 ರನ್ ಸಿಡಿಸಿದ್ದಾರೆ.
ಇದರ ನೆರವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್ ಗಳಲ್ಲಿ 191 ರನ್ ಗಳಿಸಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಚೆನ್ನೈ ತಂಡಕ್ಕೆ ಆರಂಭಿಕರಾದ ಗಾಯಕ್ವಾಡ್ (33), ಫಾಫ್ ಡುಪ್ಲಸಿಸ್ ( 50) ಉತ್ತಮ ಅಡಿಪಾಯ ಹಾಕಿಕೊಟ್ಟರು.
ಬಳಿಕ ಸುರೇಶ್ ರೈನಾ(24), ಅಂಬಾಟಿ(14) ರನ್ ವೇಗವನ್ನ ಹೆಚ್ಚಿಸಿದರು.
ಕೊನೆಯಲ್ಲಿ ಜಡೇಜಾ ಸಿಡಿಲಬ್ಬರದ ಆಟವಾಡಿದ್ರು. ಜಡೇಜಾ ಕೇವಲ 28 ಎಸೆತಗಳಲ್ಲಿ 62 ರನ್ ಚಚ್ಚಿದರು. ಧೋನಿ 3 ರನ್ ಗಳಿಸಿದ್ರು.
ಆರ್ ಸಿಬಿಗೆ ಚೆನ್ನೈ 191 ರನ್ ಗಳ ಬೃಹತ್ ಗುರಿ ನೀಡಿದೆ.