ಐಪಿಎಲ್ 2021 – ಸೂಪರ್ ಓವರ್ ನಲ್ಲಿ ಎಸ್ ಆರ್ ಎಚ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆ ಜಯ
14ನೇ ಆವೃತ್ತಿಯ ಐಪಿಎಲ್ ಟೂರ್ನಿಯ 20ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೂಪರ್ ಓವರ್ ನಲ್ಲಿ ಸನ್ ರೈಸರ್ಸ್ ಹೈದ್ರಬಾದ್ ತಂಡವನ್ನು ಪರಾಭವಗೊಳಿಸಿತು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.
ಚೆನ್ನೈ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತ್ತು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆರಂಭಿಕ ಪೃಥ್ವಿ ಶಾ ಆಕರ್ಷಕ 53 ರನ್ ಗಳಿಸಿದ್ರೆ, ಶಿಖರ್ ಧವನ್ 28 ರನ್ ಹಾಗೂ ನಾಯಕ ರಿಷಬ್ ಪಂತ್ 37 ರನ್ ದಾಖಲಿಸಿದ್ರು. ಇನ್ನು ಅನುಭವಿ ಸ್ಟೀವನ್ ಸ್ಮಿತ್ ಅಜೇಯ 39 ರನ್ ಗಳಿಸಿದ್ರೆ, ಶಿಮ್ರೋನ್ ಹೆಟ್ಮೇರ್ ಒಂದು ರನ್ ಹಾಗೂ ಮಾರ್ಕಸ್ ಸ್ಟೋನಿಸ್ ಅಜೇಯ 2 ರನ್ ಗಳಿಸಿದ್ರು.
ipl 2021- Delhi Capitals overcome SunRisers via Super Over
ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದ್ರಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 159 ರನ್ ಗಳಿಸಿ ಪಂದ್ಯವನ್ನು ಟೈ ಮಾಡಿಕೊಂಡಿತ್ತು.
ನಾಯಕ ಡೇವಿಡ್ ವಾರ್ನರ್ ಆರು ರನ್ ಗೆ ಸೀಮಿತವಾದ್ರು. ನಂತರ ಜಾನಿ ಬೇರ್ ಸ್ಟೋವ್ ಬಿರುಸಿನ 38 ರನ್ ಸಿಡಿಸಿದ್ರು. ಇನ್ನೊಂದೆಡೆ ಕೇನ್ ವಿಲಿಯಮ್ಸನ್ ತಂಡಕ್ಕೆ ಆಧಾರವಾಗಿ ನಿಂತ್ರು. ವಿರಾಟ್ ಸಿಂಗ್ 4 ರನ್, ಕೇದಾರ್ ಜಾಧವ್ 9 ರನ್, ಅಭಿಷೇಕ್ ಶರ್ಮಾ 5 ರನ್, ರಶೀದ್ ಖಾನ್ 0 ರನ್, ವಿಜಯ್ ಶಂಕರ್ 8 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದ್ರು.
ಆದ್ರೂ ತಲೆಕೆಡಿಸಿಕೊಳ್ಳದ ಕೇನ್ ವಿಲಿಯಮ್ಸನ್ ಅಜೇಯ 66 ರನ್ ಹಾಗೂ ಜಗದೀಶ್ ಸುಚಿತ್ ಅಜೇಯ 14 ರನ್ ದಾಖಲಿಸಿ ಪಂದ್ಯವನ್ನು ರೋಚಕ ಘಟ್ಟ ತಲುಪಿದ್ದರು.
ಇನ್ನು ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟ್ ಮಾಡಿದ್ದ ಸನ್ ರೈಸರ್ಸ್ ಹೈದ್ರಬಾದ್ ತಂಡ ಕೇವಲ ಏಳು ರನ್ ಗಳಿಸಿತ್ತು. ಅಕ್ಷರ್ ಪಟೇಲ್ ಪರಿಣಾಮಕಾರಿಯಾಗಿ ಬ್ಯಾಟ್ ಬೀಸಿದ್ರು.
ಗೆಲ್ಲಲು 8 ರನ್ ಗಳ ಗುರಿ ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಎಂಟು ರನ್ ಗಳಿಸಿ ಗೆಲುವಿನ ನಗೆ ಬೀರಿತ್ತು. ರಿಷಬ್ ಪಂತ್ ಬೌಂಡರಿ ದಾಖಲಿಸುವ ಮೂಲಕ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದ್ರು. ರಶೀದ್ ಖಾನ್ ಅವರ ಮ್ಯಾಜಿಕ್ ಎಸೆತಗಳು ವರ್ಕ್ ಔಟ್ ಆಗಲಿಲ್ಲ.
ಅಮೋಘ ಆಟವನ್ನಾಡಿದ್ದ ಪೃಥ್ವಿ ಶಾ ಅವರು ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.