ರಾಜ್ಯದಲ್ಲಿ 14 ದಿನಗಳ ಕರ್ಫ್ಯೂ ಶೈಲಿಯ ‘ಲಾಕ್ ಡೌನ್ ‘ – ಏನಿರುತ್ತೆ..? ಏನಿರಲ್ಲ..? ಮಾರ್ಗಸೂಚಿಯಲ್ಲೇನಿದೆ..?
ಬೆಂಗಳೂರು: ಕೊರೊನಾ ಆತಂಕ ಹೆಚ್ಚಾಗುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಥೇಟ್ ಮುಂಬೈ ಮಾದರಿಯನ್ನ ಅನುಸರಿಸಿದೆ. ಮುಂಬೈನಲ್ಲಿ ಲಾಕ್ ಡೌನ್ ಇಲ್ಲ. ಅದ್ರೂ ಜನತಾ ಕರ್ಫ್ಯೂ ಶೈಲಿಯಲ್ಲಿ ಲಾಕ್ ಡೌನ್ ಘೋಷಣೆ ಮಾಡಿದೆ. ಅದರಂತೆಯೇ ನಾಳೆ ರಾತ್ರಿ 9 ಗಂಟೆಯಿಂದಲೇ ರಾಜ್ಯದಲ್ಲೂ ಲಾಕ್ ಡೌನ್ ಘೋಷಣೆ ಮಾಡಿ ಮಾರ್ಗಸೂಚಿ ಹೊರೆಡಿಸಿದೆ ಸರ್ಕಾರ. ನಾಳೆ ರಾತ್ರಿ 9 ಗಂಟೆಯಿಂದಲೇ 14 ದಿನಗಳ ಲಾಕ್ಡೌನ್ ಅನ್ನು ರಾಜ್ಯದಲ್ಲಿ ಘೋಷಿಸಲಾಗಿದೆ. ಈ ಸಮಯದಲ್ಲಿ ಏನಿರುತ್ತೆ? ಏನಿರಲ್ಲ ಎನ್ನುವ ಗೊಂದಲಗಳು ಸಹ ಸಹಜಚವಾಗಿ ಜನರಲ್ಲಿದೆ.
ಮಾರ್ಗಸೂಚಿಯಲ್ಲೇನಿದೆ.
- KSRTC , BMTC ಸೇರಿ ಯಾವುದೇ ಬಸ್ ಸೌಲಭ್ಯ ಲಭ್ಯವಿರುವುದಿಲ್ಲ.
- ಮೆಟ್ರೋ ರೈಲು ಸೇವೆಯನ್ನೂ ಸ್ಥಗಿತಗೊಳಿಸಲಾಗುವುದು. ಆಟೋ, ಕ್ಯಾಬ್, ಖಾಸಗಿ ವಾಹನಗಳ ಸಂಚಾರಕ್ಕೂ ನಿರ್ಬಂಧವಿರಲಿದೆ.
- ತುರ್ತು ಸೇವೆಗೆ ಆಟೋ ಬಳಸಿಕೊಳ್ಳುವಂತೆ ತಿಳಿಸಲಾಗಿದೆ.
- ರೈಲುಗಳು ಮತ್ತು ವಿಮಾನಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ – ಟಿಕೆಟ್ಗಳನ್ನು ಜನರು ಸಂಚಾರಕ್ಕೆ ಪಾಸ್ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ.
- ಶಾಲಾ, ಕಾಲೇಜುಗಳು ಮುಚ್ಚಿರಲಿವೆ. ಆನ್ ಲೈನ್ ತರಗತಿ ನಡೆಸಲು ಅನುಮತಿಯಿದೆ.
- ಹೋಟೆಲ್, ರೆಸ್ಟೋರೆಂಟ್, ಬಾರ್, ಎಂಆರ್ಪಿಗಳಲ್ಲಿ ಪಾರ್ಸಲ್ ಗೆ ಮಾತ್ರ ಅವಕಾಶವಿದೆ.
- ಸಿನಿಮಾ ಹಾಲ್, ಜಿಮ್, ಕ್ರೀಡಾಂಗಣಗಳು, ಸ್ವಿಮ್ಮಿಂಗ್ ಪೂಲ್ಗಳನ್ನು ಮುಚ್ಚಲಾಗುವುದು.
- ಎಲ್ಲ ಧಾರ್ಮಿಕ ಸ್ಥಳಗಳು ಬಾಗಿಲು ಮುಚ್ಚಿರಲಿವೆ.
- ಆಸ್ಪತ್ರೆಗಳು, ತುರ್ತು ಸೇವೆಗಳು, ವೈದ್ಯಕೀಯ ವಲಯಕ್ಕೆ ಸೇರಿದ ಕೇಂದ್ರಗಳು, ಗಾರ್ಮೆಂಟ್ಗಳು, ಬಿಬಿಎಂಪಿ, ಸ್ಥಳೀಯ ಸಂಸ್ಥೆಗಳು, ಸರ್ಕಾರಿ ಕಚೇರಿಗಳು (ಶೇ. 50 ಸಿಬ್ಬಂದಿ) ಎಂದಿನಂತೆ ತೆರೆದಿರಲಿವೆ.