ಕರ್ನಾಟಕದಲ್ಲಿ ಕೊರೊನಾ ಬ್ಲಾಸ್ಟ್ – ಒಂದು 31,830 ಪಾಸಿಟಿವ್ ಕೇಸ್ ಪತ್ತೆ..!
ಬೆಂಗಳೂರು : ಕರ್ನಾಟಕದಲ್ಲಿ ಇಂದು ಒಂದೇ ದಿನ 31,830 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಒಟ್ಟು 180 ಜನರು ಮೃತಪಟ್ಟಿದ್ದಾರೆ. ಕೇವಲ ಬೆಂಗಳೂರಿನಲ್ಲೇ ಒಂದೇ ದಿನ 17,550 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 97 ಮಂದಿ ಸಾವನ್ನಪ್ಪಿದ್ದಾರೆ.
ಇನ್ನೂ ಇಂತಹ ಪರಿಸ್ಥಿತಿಯನ್ನ ನಿಯಂತ್ರಿಸಲು ಕರ್ನಾಟಕ ರಾಜ್ಯ ಸರ್ಕಾರ ಮಹಾರಾಷ್ಟ್ರ ಮಾದರಿಯಲ್ಲೇ ಕರ್ಫ್ಯೂ ಶೈಲಿಯ ಲಾಕ್ ಡೌನ್ ಹೇರಿದೆ.
ಇಂದು ರಾತ್ರಿ 9 ಗಂಟೆಯ ನಂತರ 14 ದಿನಗಳ ಕಾಲ ಲಾಕ್ ಡೌನ್ ಇರಲಿದೆ. ಕಠಿಣ ನಿಯಮಗಳನ್ನ ಹೇರಿದೆ.