ಬೆಂಗಳೂರು: ಇಂದು ರಾತ್ರಿ 9 ಗಂಟೆಯಿಂದ 14 ದಿನಗಳ ಕಾಲ ಕರ್ಫ್ಯೂ ಜಾರಿಯಲ್ಲಿರಲಿದೆ. ಕೊರೊನಾ 2ನೇ ಅಲೆ ವಿರುದ್ಧ ರಾಜ್ಯ ಸರ್ಕಾರ ಸಮರ ಸಾರಿದ್ದು, ಲಾಕ್ ಡೌನ್ ವಿಧಿಸಿದೆ. ಆದ್ರೆ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಿದೆ. ಈ ಸಂದರ್ಭದಲ್ಲಿ ಏನೆಲ್ಲಾ ಇರಲಿದೆ.. ಯಾವುದಕ್ಕೆ ಅವಕಾಶ ಇರಲಿದೆ. ಯಾವುದಕ್ಕೆ ಅನುಮತಿ ಇಲ್ಲ…
ಏನೆಲ್ಲಾ ಇರಲಿದೆ…
ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಆಹಾರ, ದಿನಸಿ, ಹಣ್ಣು, ಮಾಂಸ, ತರಕಾರಿ, ಮೀನು, ಜಾನುವಾರುಗಳಿಗೆ ಮೇವು, ವ್ಯಾಪಾರ, ಪಡಿತರ ವಿತರಣೆ ಇರಲಿವೆ.
ಮದ್ಯದಂಗಡಿಗಳಲ್ಲಿ ಪಾರ್ಸೆಲ್ ಪಡೆಯಲು ಅನುಮತಿ ನೀಡಲಾಗಿದೆ.
ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್, ಮನೆ ವಿಲೇವಾರಿಗೆ ಅವಕಾಶವಿದೆ.
ಕ್ರೀಡಾ ಪ್ರಾಧಿಕಾರದಿಂದ ಅನುಮತಿಸಿದ ತರಬೇತಿ, ಕ್ರೀಡಾಭ್ಯಾಸವನ್ನು ಪ್ರೇಕ್ಷಕರಿಲ್ಲದೆ ನಡೆಸಬಹುದು.
ಸಿಮ್ಮಿಂಗ್ ಫೆಡರೇಶನ್ ನಿಂದ ಅನುಮತಿ ಪಡೆದ ಈಜುಕೊಳದಲ್ಲಿ ತರಬೇತಿ ಪಡೆಯಬಹುದು.
ಧಾರ್ಮಿಕ ಕೇಂದ್ರಗಳಿಗೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಅರ್ಚಕರು ಪೂಜೆ ನೆರವೇರಿಸಬಹುದು.
ಸರಕು ಸಾಗಣೆ ವಾಹನಗಳ ಓಡಾಟ ಮತ್ತು ಅಗತ್ಯ ಸೇವೆಯಲ್ಲಿರುವ ಉದ್ಯಮ ಇಲಾಖೆಗಳ ಕಾರ್ಯ ನಿರ್ವಹಣೆ ಇರಲಿದೆ.
ಬ್ಯಾಂಕ್ ವಿಮೆ, ಪ್ರಿಂಟ್, ಎಲೆಕ್ಟ್ರಾನಿಕ್ ಮೀಡಿಯಾ, ಅಂಚೆ ಕಚೇರಿ ಮೊದಲಾದವುಗಳು ಕಾರ್ಯನಿರ್ವಹಿಸಲಿವೆ
ಯಾವುದಕ್ಕೆ ಅನುಮತಿ ಇಲ್ಲ..
ಬಸ್, ಮೆಟ್ರೋ, ಆಟೋ, ಕ್ಯಾಬ್ ಸೇರಿದಂತೆ ಎಲ್ಲ ರೀತಿಯ ವಾಹನ ಸಂಚಾರ ನಿಷೇಧಿಸಲಾಗಿದೆ. ಶಾಲಾ, ಕಾಲೇಜು, ಶಿಕ್ಷಣ ಸಂಸ್ಥೆ, ತರಬೇತಿ ಕೇಂದ್ರಗಳು ಮುಚ್ಚಲಿದ್ದು, ಆನ್ಲೈನ್ ಕ್ಲಾಸ್ ಗೆ ಅವಕಾಶ ಇರುತ್ತದೆ. ಜಿಮ್, ಕ್ರೀಡಾ ಸಂಕೀರ್ಣ, ಚಿತ್ರಮಂದಿರ, ಶಾಪಿಂಗ್ ಮಾಲ್, ಕ್ರೀಡಾಂಗಣಗಳಿರಲ್ಲ. ಈಜುಕೊಳ, ಮನರಂಜನಾ ಕೇಂದ್ರ, ರಂಗಮಂದಿರ, ಸಭಾಂಗಣ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಕಾರ್ಮಿಕ ಸಮಾವೇಶ ಇರಲ್ಲ.