ಐಪಿಎಲ್ 2021 – ಪಂತ್ – ಹೆಟ್ಮೇರ್ ಹೋರಾಟ ವ್ಯರ್ಥ- ಎಬಿಡಿ ಬಿರುಸಿನ ಆಟ- ಆರ್ ಸಿಬಿಗೆ ರೋಚಕ ಜಯ
ಎಬಿಡಿ ವಿಲಿಯರ್ಸ್ ಆರ್ಭಟದ ಮುಂದೆ ಶಿಮ್ರೊನ್ ಹೆಟ್ಮೇರ್ ಮತ್ತು ರಿಷಬ್ ಪಂತ್ ಹೋರಾಟ ವ್ಯರ್ಥವಾಯ್ತು. ಹೀಗಾಗಿ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ 22ನೇ ಪಂದ್ಯದಲ್ಲಿ ಆರ್ ಸಿಬಿ ತಂಡ ಒಂದು ರನ್ ನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ರೋಚಕ ಜಯ ದಾಖಲಿಸಿತ್ತು.
ಗೆಲ್ಲಲು 172 ರನ್ ಗಳ ಸವಾಲನ್ನು ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಾಲ್ಕು ವಿಕೆಟ್ ಕಳೆದುಕೊಂಡು 170 ರನ್ ಗಳಿಸಲಷ್ಟೇ ಶಕ್ತವಾಯ್ತು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ನಾಯಕ ರಿಷಬ್ ಪಂತ್ ಅಜೇಯ 58 ರನ್ ದಾಖಲಿಸಿದ್ರು. ಆದ್ರೆ ತಂಡಕ್ಕೆ ಗೆಲುವು ಒದಗಿಸಿಕೊಡುವಲ್ಲಿ ವಿಫಲರಾದ್ರು. ಮತ್ತೊಂದೆಡೆ ಪಂದ್ಯದ ಗತಿಯನ್ನೇ ಬದಲಾಯಿಸಿದ ಶಿಮ್ರೋನ್ ಹೆಟ್ಮೇರ್ 25 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಹಾಗೂ ಎರಡು ಬೌಂಡರಿಗಳ ಸಹಾಯದಿಂದ ಅಜೇಯ 53 ರನ್ ಗಳಿಸಿ ನಿರಾಸೆ ಅನುಭವಿಸಿದ್ರು.
ಇನ್ನುಳಿದಂತೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪೃಥ್ವಿ ಶಾ 21 ರನ್ ಗೆ ಸುಸ್ತಾದ್ರೆ, ಶಿಖರ್ ಧವನ್ 6 ರನ್ , ಸ್ಟೀವನ್ ಸ್ಮಿತ್ 4 ರನ್ ಹಾಗೂ ಮಾರ್ಕಸ್ ಸ್ಟೋನಿಸ್ 22 ರನ್ ಗಳಿಸಿದ್ರು.
ಇದಕ್ಕು ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ ತಂಡ 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 171 ರನ್ ದಾಖಲಿಸಿತ್ತು.
ಆರ್ ಸಿಬಿಯ ಸ್ಟಾರ್ ಬ್ಯಾಟ್ಸ್ ಮೆನ್ ಎಬಿಡಿ ವಿಲಿಯರ್ಸ್ ಅಜೇಯ 75 ರನ್ ದಾಖಲಿಸಿದ್ರು. 42 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಐದು ಸಿಕ್ಸರ್ ಗಳನ್ನು ಸಿಡಿಸಿದ್ರು. ಅದ್ರಲ್ಲೂ ಕೊನೆಯ ಎರಡು ಓವರ್ ಗಳಲ್ಲಿ ಆರ್ ಸಿಬಿ 32 ರನ್ ದಾಖಲಿಸಿತ್ತು.
ಇನ್ನುಳಿದಂತೆ ವಿರಾಟ್ ಕೊಹ್ಲಿ 12 ರನ್ ಗೆ ಸುಸ್ತಾದ್ರೆ, ದೇವ್ ದತ್ ಪಡಿಕ್ಕಲ್ ಹೋರಾಟ 17 ರನ್ ಗೆ ಸೀಮಿತವಾಯ್ತು. ಹಃಆಗೇ ರಜತ್ ಪಟಿದಾರ್ 31 ರನ್ ಹಾಗೂ ಗ್ಲೇನ್ ಮ್ಯಾಕ್ಸ್ ವೆಲ್ 25 ರನ್ ಹಾಗೂ ವಾಷಿಂಗ್ಟನ್ ಸುಂದರ್ 6 ರನ್ ದಾಖಲಿಸಿದ್ರು.
ಸ್ಪೋಟಕ ಬ್ಯಾಟಿಂಗ್ ನಡೆಸಿ ಆರ್ ಸಿಬಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಬಿಡಿ ವಿಲಿಯರ್ಸ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.