ಒಂದು ಚಟ್ಟ ಕಟ್ಟಿ ಸಿಎಂ ಮನೆಗೆ ಕಳಿಸುತ್ತೇನೆ : ಡಿ.ಕೆ.ಶಿವಕುಮಾರ್
ಬೆಂಗಳೂರು : ಒಂದು ಚಟ್ಟ ಕಟ್ಟಿ ಸಿಎಂ ಮನೆಗೆ ಕಳಿಸುತ್ತೇನೆ. ಅಕ್ಕಿ ಕೇಳಿದ್ರೆ ಸಾಯಿರೀ ಅಂತಾನಲ್ಲ ಅದಕ್ಕಾಗಿ ಅವನ ಚಟ್ಟ ಕಟ್ಟಿ ಕಳಿಸಿಕೊಡಿ ಎಂದು ಹೇಳ್ತೇನೆ. ಕತ್ತಿ ಅವರ ಅಣಕು ಶವಯಾತ್ರೆ ಮಾಡ್ತೀವಿ. ಸಿಎಂ ಮನೆಗೆ ಮುತ್ತಿಗೆ ಹಾಕ್ತೀವಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕತ್ತಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಬಿಜೆಪಿ ಸಂಸ್ಕøತಿ. ಸರ್ಕಾರದ ಯಾವ ಸಚಿವರು ಇದರ ಬಗ್ಗೆ ಮಾತಾಡಿ ಎಂದು ಹೇಳುವುದಿಲ್ಲ. ಸಚಿವರ ಈ ಧೋರಣೆಗಳಿಂದ ಈ ರೀತಿ ನಡೆಯುತ್ತಿದೆ. ಇದರಲ್ಲಿ ಯಾರೂ ಹೆಚ್ಚಿಲ್ಲ, ಯಾರೂ ಕಡಿಮೆಯಿಲ್ಲ. ಇದಕ್ಕೆ ಸಿಎಂ ಉತ್ತರ ಕೊಡಬೇಕು. ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉತ್ತರ ಕೊಡಬೇಕು. ಬಿಜೆಪಿ ನಾಯಕರು ಉತ್ತರ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಅಕ್ಕಿ ಕೊಡಿ ಎಂದು ಕೇಳಿದ್ರೆ, ಸತ್ರೆ ಸಾಯಿ ಎಂದು ಹೇಳಿದ್ರೆ, ಯಾಕೆ ಇವರು ಸಚಿವರಾಗಿ ಇರಬೇಕು. ಕೂಡಲೇ ಸಿಎಂ ರಾಜೀನಾಮೆ ತೆಗೆದುಕೊಳ್ಳಬೇಕು. ಜನರ ಬಳಿ ಕ್ಷಮೆ ಕೇಳುವುದಕ್ಕೂ ಮೊದಲು ರಾಜೀನಾಮೆ ಪಡೆಯಲಿ. ನಾನು ನಮ್ಮ ಕಾರ್ಯಕರ್ತರಿಗೆ ಹೇಳಿ ಒಂದು ಚಟ್ಟ ಕಟ್ಟಿಸುತ್ತೇನೆ. ಅದನ್ನ ಸಿಎಂ ನಿವಾಸಕ್ಕೆ ಕಳುಹಿಸುತ್ತೇವೆ. ಅದರಲ್ಲಿ ಕತ್ತಿ ಅವರ ಅಣಕು ಶವಯಾತ್ರೆ ಮಾಡ್ತೀವಿ. ಸಿಎಂ ಮನೆಗೆ ಮುತ್ತಿಗೆ ಹಾಕ್ತೀವಿ. ಅವರ ಅಣಕು ಶವಯಾತ್ರೆ ಮಾಡಿ ಗಮನ ಸೆಳೆಯುತ್ತೇವೆ ಎಂದು ಕಿಡಿಕಾರಿದರು.
ಇನ್ನು ನಮ್ಮ ಸರ್ಕಾರದಲ್ಲಿ ನಾವು ಏಳು ಕೆಜಿ ಅಕ್ಕಿಯನ್ನು ಕೊಡುತ್ತಿದ್ವಿ. ಅದನ್ನು ಕಡಿತ ಮಾಡಿದ್ದಾರೆ. ಕೂಡಲೇ ಕತ್ತಿ ಅವರನ್ನು ಸಚಿವ ಸ್ಥಾನದಿಂದ ತೆಗೆಯಬೇಕು. ಜನರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಸಂಪುಟದಿಂದ ಕೈಬಿಡಬೇಕು. ನಾವು ಕ್ಷಮೆ ಕೇಳಿ ಎಂದು ಹೇಳಲ್ಲ. ಇಂದಿನ ಪರಿಸ್ಥಿತಿಗೆ ಸರ್ಕಾರವೇ ಕಾರಣ ಎಂದರು.ಯಡಿಯೂರಪ್ಪ ಅವರೇ ನಿಮಗೆ ನಿಮ್ಮ ಜೀವನದ ಕೊನೆಯ ರಾಜಕಾರಣದಲ್ಲಿ ಒಳ್ಳೆಯ ಫೇರ್ ವೆಲ್ ತಗೋಬೇಕಾದ್ರೆ ರಾಜಕಾರಣದ ಕೊನೆಯಲ್ಲಿ ಜನರ ಪರವಾಗಿ ನಿಂತೆ ಎಂದು ತೋರಿಸಬೇಕು. ಸಚಿವ ಕತ್ತಿಯನ್ನು ತೆಗೆದು ನೀವು ಸಾಕ್ಷಿ ಆಗಬೇಕು ಎಂದು ಡಿಕೆಶಿ ಆಗ್ರಹಿಸಿದ್ದಾರೆ.










