ನಿಂಬೆ ರಸದಿಂದ ಶಿಕ್ಷಕ ಸತ್ತಿದ್ದು ನಿಜನಾ..? ಸುಳ್ಳಾ..?
ರಾಯಚೂರು : ಕೊರೊನಾ ಹರಡಲ್ಲ ಎಂದು ಮೂಗಿಗೆ ನಿಂಬೆ ರಸ ಹಾಕಿಸಿಕೊಂಡ ಶಿಕ್ಷಕ ಸಾವನ್ನಪ್ಪಿದ್ದಾರೆ ಅನ್ನೋ ಸುದ್ದಿ ರಾಜ್ಯದೆಲ್ಲೆಡೆ ಭಾರಿ ಸದ್ದು ಮಾಡುತ್ತಿದೆ. ಸಾಕಷ್ಟು ಮಂದಿ ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಇದೀಗ ಈ ಬಗ್ಗೆ ಮೃತ ಬಸವರಾಜ ಅವರ ಸಹೋದರ ಮಹಾಂತೇಶ ಸ್ಪಷ್ಟನೆ ನೀಡಿದ್ದಾರೆ.
ಮಹಾಂತೇಶ್ ಹೇಳಿದ ಪ್ರಕಾರ, ಬಸವರಾಜ್ ಅವರು ಮೂಗಿನಲ್ಲಿ ನಿಂಬೆ ರಸ ಹಾಕಿಕೊಂಡಿದ್ದರಿಂದ ಸತ್ತಿಲ್ಲ, ಬದಲಾಗಿ ಲೋ ಬಿಪಿ ಮತ್ತು ಅದಕ್ಕೆ ಸಂಭವಿಸಿದ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಬುಧವಾರ ಬೆಳಗ್ಗೆ ಬಸವರಾಜ್ ಅವರಿಗೆ ಲೋ ಬಿಪಿ ಆಗಿದ್ದು, ಹೃದಯಾಘಾತ ಆಗಿದ್ದತಂತೆ. ಕೂಡಲೇ ಅವರನ್ನ ಸಿಂಧನೂರು ನಗರದ ಶಾಂತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಅಷ್ಟರೊಳಗೆ ಅವರು ಮೃತಪಟ್ಟಿದ್ದನ್ನು ಅಲ್ಲಿನ ವೈದ್ಯರು ಖಚಿತಪಡಿಸಿದರು ಎಂದು ಮಹಾಂತೇಶ್ ಸ್ಪಷ್ಟ ಪಡಿಸಿದ್ದಾರೆ.










