ರಾಖಿ ನೌಟಂಕಿ – ‘ಕೊರೊನಾ ಕಾಣಿಸಿದ್ರೆ ಸ್ಯಾನಿಟೈಸರ್ ಹೇಗೆ ಸ್ಪ್ರೇ ಮಾಡಬೇಕು’… ‘ಕಂಗನಾ ದಯಮಾಡಿ ಸಹಾಯ ಮಾಡಮ್ಮ ‘..!
ಮುಂಬೈ: ಕಂಗನಾಗೆ ಬಾಲಿವುಡ್ ನಲ್ಲಿ ಅಷ್ಟೇ ಅಲ್ಲ ರಾಜಕೀಯದಲ್ಲಿ ಸಿಕ್ಕಾಪಟ್ಟೆ ಶತ್ರುಗಳಿದ್ದಾರೆ. ಸುಖಾ ಸುಮ್ಮನೆ ಎಲ್ಲರ ಜೊತೆ ವಿರೋಧ ಕಟ್ಟಿಕೊಂಡು ಸದಾ ಕಾಂಟ್ರವರ್ಸಿಯಾಗಿ ಸುದ್ದಿಯಲ್ಲಿರುವ ಕಂಗನಾ ರಾಖಿ ಬಾಲಿವುಡ್ ನ ಕಾಂಟ್ರವರ್ಸಿ ದೀವಾ ರಾಖಿ ಸಾವಂತ್ ಜೊತೆಗೂ ಕಿರಿಕ್ ಮಾಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಇಬ್ಬರ ಜಗಳ ಆಗಾಗ ಸುದ್ದಿಯಲ್ಲಿರುತ್ತೆ. ಇದೀಗ ರಾಖಿ ಕಂಗನಾಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಂಗ್ಯಾತ್ಮಕವಾಗಿ ಮನವಿ ಮಾಡಿಕೊಂಡಿದ್ದಾರೆ.
ಹೌದು ನೌಟಂಕಿ ಕ್ವೀನ್ ರಾಖಿ ಬಾಲಿವುಡ್ ಮಣಿಕರ್ಣಿಕಾಗೆ ಕೊರೊನಾ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ನಿಮ್ಮ ಬಳಿ ಕೋಟಿ ಕೋಟಿ ಹಣವಿದೆ. ಆಕ್ಸಿಜನ್ ಖರೀದಿಸಿ ದೇಶ ಸೇವೆಯಲ್ಲಿ ಭಾಗಿಯಾಗಿ ಎಂದು ಹೇಳಿದ್ದಾರೆ. ಅಂದ್ಹಾಗೆ ತಮ್ಮ ನಿವಾಸದ ಬಳಿ ಮಾಧ್ಯಮದ ಎದುರು ಮೊದಲಿಗೆ ಸಿಕ್ಕಾಪಟ್ಟೆ ಹೈಡ್ರಾಮಾ ಮಾಡಿದ ರಾಖಿ ಕೊರೊನಾ ಕಣ್ಣಿಗೆ ಕಾಣಿಸಿದ್ರೆ ಹೇಗೆ ಸ್ಯಾನಿಟೈಸರ್ ನ ಸ್ಪ್ರೇ ಮಾಡಬೇಕು ಅಂತ ತೋರಿಸಿದ್ದಾರೆ.
ಅವರ ವರ್ತನೆ ಮಾಧ್ಯಮದವರಿಗೆ ನಗು ತರಿಸಿದೆ. ರಾಖಿ ಸಾವಂತ್, ಎಲ್ಲರೂ ಸ್ಯಾನಿಟೈಸರ್ ಬಳಸಿ ಡಬಲ್ ಮಾಸ್ಕ್ ಹಾಕಿಕೊಳ್ಳಿ. ಸ್ಮಶಾನದಲ್ಲಿ ಹೆಣಗಳನ್ನ ಸುಡಲು ಜಾಗವಿಲ್ಲ. ದೇಶದ ಪರಿಸ್ಥಿತಿ ತುಂಬಾ ಕಠಿಣವಾಗಿದೆ. ನಿಮ್ಮನ್ನು ನೀವು ಕಾಪಾಡಿಕೊಳ್ಳೋದರ ಜೊತೆ ಪೋಷಕರನ್ನ ಕಾಪಾಡಿಕೊಳ್ಳಿ ಎಂದು ಜಾಗೃತಿ ಮೂಡಿಸಿದರು.
https://www.instagram.com/tv/CONrgtXjpPE/?utm_source=ig_embed








