ಹಿರಿತೆರೆಯಲ್ಲಿ ಮೊದಲ ಸಿನಿಮಾ ಮೂಲಕವೇ ಮೋಡಿ ಮಾಡಿದ್ದ ಉಪ್ಪೆನಾ ಜೋಡಿ ‘ಕಿರುತೆರೆಯ’ ರೆಕಾರ್ಡ್ ಬ್ರೇಕ್ ಮಾಡಿದೆ..!
ತೆಲುಗಿನಲ್ಲಿ ವರ್ಷದ ಆರಂಭದಲ್ಲಿ ರಿಲೀಸ್ ಸೂಪರ್ ಹಿಟ್ ಆದ ಸಿನಿಮಾ ಅಂದ್ರೆ ಉಪ್ಪೆನಾ, ರೊಮ್ಯಾಂಟಿಕ್ , ಎಮೋಷನಲ್ , ಆಕ್ಷನ್ ಸೀನ್ಸ್ ಕಾನ್ಸೆಪ್ಟ್ ನಿಂದ ಹೆಚ್ಚಾಗಿ ಯೂಥ್ಸ್ ಗೆ ಕನೆಕ್ಟ್ ಆಗಿದ್ದ ಸಿನಿಮಾ. ಈ ಸಿನಿಮಾ ಮೂಲಕ ನಾಯಕ ಹಾಗೂ ನಾಯಕಿಯಾಗಿ ಕನ್ನಡದ ಕೃತಿ ಶೆಟ್ಟಿ ಹಾಗೂ ವೈಷ್ಣವ್ ಮೊದಲ ಸಿನಿಮಾದಲ್ಲೇ ಸಕ್ಸಸ್ ಕಂಡರು. ಅಲ್ಲದೇ ಒನ್ ಆಫ್ ದ ಫೇವರೇಟ್ ಜೋಡಿಯಾಗಿದ್ದಾರೆ.
ಅಲ್ಲದೇ ಈ ಜೋಡಿ ಮತ್ತೊಮ್ಮೆ ಸಿನಿಮಾಗೆ ಒಂದಾಗ್ತಿದೆ ಎಂಬ ಸುದ್ದಿ ಇದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಈ ಸಿನಿಮಾದಲ್ಲಿ ‘ಬೇಬಮ್ಮ – ಆಶಿ’ ಕೆಮಿಸ್ಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಬಳಿಕ OTT ಗೆ ರಿ,ಲೀಸ್ ಆಗಿ ಅಲ್ಲೂ ಕೂಡ ಧಮಾಲ್ ಮಾಡಿದೆ. ಬಳಿಕ ಟಿವಿಯಲ್ಲಿ ಪ್ರಸಾರವಾಗಿ TRP ನಲ್ಲಿ ರೆಕಾರ್ಡ್ ಬ್ರೇಕ್ ಮಾಡಿದೆ.
ಹೌದು ಸಿನಿಮಾ ಬಿಡುಗಡೆಯಾಗಿ 100 ಕೋಟಿ ರೂ. ಗಳಿಕೆ ಮಾಡಿದ ಬಳಿಕವೂ ಉಪ್ಪೇನಾ ದಾಖಲೆ ನಿರ್ಮಿಸಿದೆ. ಇತ್ತೀಚಿಗೆ ಉಪ್ಪೇನಾ ಸಿನಿಮಾ ಮಾ ಟಿವಿಯಲ್ಲಿ ಪ್ರಸಾರವಾಗಿತ್ತು. ಸಿನಿಮಾ 18.5 ರೇಟಿಂಗ್ ಪಡೆದಿದೆ. ಚೊಚ್ಚಲ ನಾಯಕನ ಸಿನಿಮಾ ಇಷ್ಟು ರೇಟಿಂಗ್ ಪಡೆದಿರುವುದು ಇದೇ ಮೊದಲು. ಈ ಮೂಲಕ ವೈಷ್ಣವ್ ಮತ್ತು ಕೃತಿ ಹೊಸ ರೆಕಾರ್ಡ್ ಕ್ರಿಯೇಟ್ ಮಾಡಿದ್ದಾರೆ.
ತೆಲುಗು ಸಿನಿಮಾರಂಗದಲ್ಲಿ ಕನ್ನಡದ ‘ಕಿಸ್’ ಬ್ಯೂಟಿ ಶ್ರೀಲೀಲಾ ಹವಾ..!








