ಭಾರತಕ್ಕೆ ಗಡಿಪಾರು ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಹೈಕೋರ್ಟ್ ಮೆಟ್ಟಿಲೇರಿದ ನೀರವ್ ಮೋದಿ..!
ಲಂಡನ್: ಭಾರತದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ರೂಪಾಯಿಗಳ ಪಂಗನಾಮ ಹಾಕಿ ದೇಶ ಬಿಟ್ಟು ಪರಾರಿಯಾಗಿರುವ ವಜ್ರ ಉದ್ಯಮಿ ನೀರವ್ ಮೋದಿಯ ಗಡೀಪಾರಿಗೆ ಲಂಡನ್ ನ ಕೆಳ ನ್ಯಾಯಾಲಯ ಇತ್ತೀಚೆಗೆ ಆದೇಶ ನೀಡಿತ್ತು. ಇದೀಗ ನೀರವ್ ಮೋದಿ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಬೇಕೆಂದು ಲಂಡನ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ಕಳೆದ ಏಪ್ರಿಲ್ 16ರಂದು ಇಂಗ್ಲೆಂಡ್ ಸರ್ಕಾರದ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ನೀರವ್ ಮೋದಿಯ ಗಡೀಪಾರಿಗೆ ಸಹಿ ಹಾಕಿದ್ದರು.
2019ರ ಮಾರ್ಚ್ 19ರಂದು ನೀರವ್ ಮೋದಿಯ ಬಂಧನವಾದ ನಂತರ ಹಲವು ಬಾರಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರೂ ತಿರಸ್ಕೃತವಾಗುತ್ತಾ ಬಂದಿದ್ದು ಲಂಡನ್ ನ ವಂಡ್ಸ್ ವರ್ತ್ ಜೈಲಿನಲ್ಲಿದ್ದಾರೆ. ಭಾರತದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರದ 570 ಕೋಟಿ ರೂಪಾಯಿ ವಂಚಿಸಿ ಇಂಗ್ಲೆಂಡಿಗೆ ಪರಾರಿಯಾದ ಆರೋಪದಲ್ಲಿ ನೀರವ್ ಮೋದಿ ಪ್ರಮುಖ ದೋಷಿ ಎಂದು ಇಂಗ್ಲೆಂಡಿನ ಕೆಳ ನ್ಯಾಯಾಲಯ ತೀರ್ಪು ನೀಡಿದೆ.
ಈ ವಾರವೂ ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್ ದರ್ಶನವಾಗಲ್ಲ..!








