ಸುಖ ಸಂಸಾರಕ್ಕೆ ಪಂಚಸೂತ್ರ ಕೊಟ್ಟ ಸನ್ನಿ ಲಿಯೋನ್ Sunny Leone
ಮುಂಬೈ : ಸುಖ ಸಂಸಾರಕ್ಕೆ ನಟಿ ಸನ್ನಿ ಲಿಯೋನ್ ಪಂಚ ಸೂತ್ರಗಳನ್ನ ನೀಡಿದ್ದಾರೆ.
ಸನ್ನಿ ಲಿಯೋನ್ ಮದುವೆಯಾಗಿ 10 ವರ್ಷಗಳಾದ ಸಂಭ್ರಮದಲ್ಲಿ ಪತಿ ಜೊತೆಗಿನ ಡ್ಯಾನ್ಸ್ ವೀಡಿಯೋವನ್ನ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ವೀಡಿಯೋದಲ್ಲಿ ತಮ್ಮ ವೈವಾಹಿಕ ಜೀವನದ ಗುಟ್ಟನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿಕೊಂಡಿದ್ದಾರೆ.
ಸನ್ನಿ ತಮ್ಮ ವಿಡಿಯೋದಲ್ಲಿ ಇಬ್ಬರ ಮಧ್ಯೆ ಒಳ್ಳೆಯ ಮಾತುಕತೆ ಇರಬೇಕು. ಜೊತೆಯಾಗಿ ಡೇಟ್ ನೈಟ್ ಪ್ಲಾನ್ ಮಾಡಬೇಕು. ಪತಿ – ಪತ್ನಿ ಇಬ್ಬರು ಒಟ್ಟಿಗೆ ಅಡುಗೆ ಮಾಡಿಕೊಳ್ಳಬೇಕು.
ಒಬ್ಬರನ್ನೊಬ್ಬರು ನಗಿಸುತ್ತಿರಬೇಕು. ಒಬ್ಬರು ಮತ್ತೊಬ್ಬರನ್ನು ಹೊಗಳುತ್ತಿರಬೇಕು ಎಂದು ಹೇಳಿಕೊಂಡಿದ್ದಾರೆ.
ಸದ್ಯ ಸನ್ನಿ ಲಿಯೋನ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಸಖತ್ ರೆಸ್ಪಾನ್ಸ್ ಮಾಡ್ತಿದ್ದಾರೆ.
2011ರಲ್ಲಿ ಸನ್ನಿ ಲಿಯೋನ್ ಮತ್ತು ಡೇನಿಯಲ್ ವೇಬರ್ ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.









