ದ್ರಾವಿಡನಾಡಲ್ಲಿ ‘ಸೂರ್ಯ’ನ ಶಾಖಕ್ಕೆ ಕಮರಿದ ‘ಕಮಲ’ ‘ಎಲೆ’ dmk
ಬೆಂಗಳೂರು : ದ್ರಾವಿಡರ ನಾಡು ತಮಿಳುನಾಡಲ್ಲಿ ದಶಕದ ಬಳಿಕ ಸೂರ್ಯನ ಉದಯವಾಗಿದೆ. ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆಯ ಆರಂ ಸ್ಟಾಲಿನ್ ನಾಯಕತ್ವದ ಡಿಎಂಕೆ ಪಕ್ಷ 136 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದರೆ, ಆಡಳಿತಾರೂಢ ಎಐಎಡಿಎಂಕೆ 93 ಸ್ಥಾನಗಳಲ್ಲಿ ಮುಂದಿದೆ.
234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ 118 ಸ್ಥಾನಗಳ ಅಗತ್ಯವಿದ್ದು, ಸ್ಟಾಲಿನ್ ಪಕ್ಷ ಈಗಾಗಲೇ 135 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇದರೊಂದಿಗೆ ತಮಿಳುನಾಡಲ್ಲಿ ಡಿಎಂಕೆ ಅಧಿಕಾರ ಹಿಡಿಯುವುದು ನೂರಕ್ಕೆ ನೂರು ಪಕ್ಕಾ ಆಗಿದೆ.
2011ರಿಂದ ಅಧಿಕಾರದಲ್ಲಿರುವ ಎಐಎಡಿಎಂಕೆ, ರಾಜ್ಯದ ಮೇಲಿನ ತನ್ನ ಹಿಡಿತವನ್ನು ಕಳೆದುಕೊಂಡಂತಿದೆ. 10 ವರ್ಷಗಳ ಬಳಿಕ ಸೂರ್ಯ ಚಿಹ್ನೆಯ ಡಿಎಂಕೆ ಅಧಿಕಾರ ಗದ್ದುಗೆಯತ್ತ ಸಾಗುತ್ತಿದೆ. ಇದು ಡಿಎಂಕೆ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡುವಂತೆ ಮಾಡಿದೆ.








