ಅಧಿಕಾರದತ್ತ ಟಿಎಂಸಿ : ದೀದಿ ಸುನಾಮಿ ಎದುರು ನಡೆಯದ ಮೋದಿ ಹವಾ..!
ಕೋಲ್ಕತ್ತಾ : ಈ ಬಾರಿಯ ಪಶ್ಚಿಮ ಬಂಗಾಳ ಚುನಾವಣೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ದೀದಿ ಕೋಟೆಯನ್ನ ಛಿದ್ರಗೊಳಿಸಲೇಬೇಕೆಂದು ಕಮಲ ಪಡೆ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿತ್ತು.
ಚುನಾವಣೆಗೆ ಆರು ತಿಂಗಳಿಗೂ ಮುನ್ನವೇ ಪಶ್ಚಿಮ ಬಂಗಾಳದಲ್ಲಿ ಮೊಕ್ಕಾಂ ಹೂಡಿದ್ದ ಕಮಲಕಲಿಗಳು ಎಲ್ಲಾ ಮಾರ್ಗಗಳನ್ನು ಅನುಸರಿಸಿ ಟಿಎಂಸಿಯ ನಾಯಕರನ್ನ ತಮ್ಮತ್ತ ಸೆಳೆದುಕೊಂಡಿದ್ದರು.
ಇದಲ್ಲದೇ ಬಿಜೆಪಿಯ ಬಿಗ್ ಬಾಸ್ ಗಳಾದಂತಹ ಅಮಿತ್ ಶಾ, ನರೇಂದ್ರ ಮೋದಿ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ರ್ಯಾಲಿಗಳನ್ನ ನಡೆಸಿದ್ದರು.
ಇತ್ತ ನರೇಂದ್ರ ಮೋದಿಗೆ ಸವಾಲ್ ಹಾಕಿದ್ದ ಮಮತಾ ಬ್ಯಾನರ್ಜಿ ಒಂಟಿಯಾಗಿ ಇಡೀ ರಾಜ್ಯವನ್ನ ಸುತ್ತಿ ಪ್ರಚಾರ ಮಾಡಿದ್ದರು.

ಇದೀಗ ಚುನಾವಣಾ ಮತ ಎಣಿಕೆ ಆರಂಭವಾಗಿದ್ದು, ಬಹುತೇಕ ಮಮತಾ ಬ್ಯಾನರ್ಜಿ ಪಕ್ಷಕ್ಕೆ ಜನರು ಜೈ ಹೋ ಎಂದಿದ್ದಾರೆ.
ಸದ್ಯದ ಟ್ರೆಂಡ್ ಪ್ರಕಾರ ಟಿಎಂಸಿ ಬರೋಬ್ಬರಿ 200ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇಲ್ಲಿ ಮ್ಯಾಜಿಕ್ ನಂಬರ್ 140 ಆಗಿದ್ದು, ಮಮತಾ ಬ್ಯಾನರ್ಜಿ ಸುಲಭವಾಗಿ ಈ ನಂಬರನ್ನ ದಾಟಿದ್ದಾರೆ.
ಇತ್ತ ಬಿಜೆಪಿ 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.
ಈ ಟ್ರೆಂಡ್ ಗಮನಿಸಿದ್ರೆ ಜಿದ್ದಾಜಿದ್ದಿನ ಹೋರಾಟದಲ್ಲಿ ಮಮತಾ ಬ್ಯಾನರ್ಜಿ ಗೆಲುವು ಸಾಧಿಸಿರುವುದು ಸ್ಪಷ್ಟವಾಗಿ ಕಾಣುತ್ತಿದೆ.









