ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಹೀಗಾಗಿ ಇನ್ಮುಂದೆ 100 ಡಿಗ್ರಿ ಜ್ವರ ಇದ್ದವರಿಗೂ ಕ್ವಾರಂಟೈನ್ ಮಾಡುವ ಹಾಗೂ ಅವರ ಗಂಟಲು ದ್ರವವನ್ನ ಪರಿಶೀಲನೆಗೆ ಕಳುಹಿಸುವ ಬಗ್ಗೆ ರಾಜ್ಯ ಸರ್ಕಾರ ಇಂದು ಮಹತ್ವದ ನಿರ್ಧಾರ ಕೈಗೊಂಡಿದೆ.
ಇತ್ತೀಚೆಗೆ ಹಲವಾರು ತೀವ್ರ ಉಸಿರಾಟದ ಸೋಂಕು ಕೇಸ್ ಗಳು ಪತ್ತೆಯಾಗ್ತಿದ್ದು ಇದರ ಪರಿಶೀಲನೆಯ ಬಳಿಕ ಕೊರೊನಾ ಸೋಂಕು ಇರುವುದು ದೃಢವಾಗ್ತಿದೆ. ಈ ಕಾರಣದಿಂದಾಗಿಯೇ ರಾಜ್ಯ ಸರ್ಕಾರ ಇಂಥದ್ದೊಂದು ನಿರ್ಧಾರಕ್ಕೆ ಬರಲು ಕಾರಣ ಎನ್ನಲಾಗಿದೆ. ಹೀಗಾಗಿ ಇನ್ನು ಮುಂದೆ ಶೀತ, ಅಸ್ತಮಾ, ಉಸಿರಾಟದ ತೊಂದರೆ ಇರುವವರಿಗೂ ಚೆಕಿಂಗ್ ಮಾಡಲಾಗುತ್ತದೆ.








