ಹಾಂಗ್ ಕಾಂಗ್ : ವಿದೇಶಗಳಿಂದ ಬಂದು ಮನೆಗೆಲಸ ಮಾಡುತ್ತಿರುವವರೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ
ಹಾಂಗ್ ಕಾಂಗ್ : ವಿದೇಶಗಳಿಂದ ಬಂದು ಮನೆಗೆಲಸ ಮಾಡುತ್ತಿರುವವರು ಕಡ್ಡಾಯವಾಗಿ ಕೊರೊನಾ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಹಾಂಗ್ ಕಾಂಗ್ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೇ ಒಂದು ವೇಲೆ ಲಸಿಕೆ ಹಾಕಿಸಿಕೊಳ್ಳದೇ ಇದ್ದರೆ ಕೆಲಸದಿಂದ ತೆಗೆದುಹಾಕುವ ಎಚ್ಚರಿಕೆ ನೀಡಿದೆ. ಹಾಂಗ್ ಕಾಂಗ್ನಲ್ಲಿ ಸುಮಾರು 3.70 ಲಕ್ಷ ವಿದೇಶಿ ಮನೆಗೆಲಸದವರಿದ್ದಾರೆ. ಅದರಲ್ಲಿ ಹೆಚ್ಚಿನವರು ಫಿಲಿಫೈನ್ಸ್ ಮತ್ತು ಇಂಡೋನೇಷ್ಯಾ ಮೂಲದವರಾಗಿದ್ದಾರೆ. ಇನ್ನೂ ಅಂತಹವರಿಗೆ ಉಚಿತವಾಗಿ ಲಸಿಕೆ ನೀಡಲಾಗ್ತಿದೆ.
ಆದ್ರೆ ಹಾಂಗ್ ಕಾಂಗ್ ಸರ್ಕಾರದ ನಿರ್ಧಾರಕ್ಕೆ ಫಿಲಿಫೈನ್ಸ್ ಅಸಮಾಧಾನ ಹೊರಹಾಕಿದೆ. ಕೊರೊನಾ ವಿಚಾರದಲ್ಲಿ ತನ್ನ ದೇಶದ ಪ್ರಜೆಗಳನ್ನ ತಾರತಮ್ಯದಿಂದ ನೋಡಲಾಗ್ತಿದೆ ಅಂತ ಫಿಲಿಫೈನ್ಸ್ ಸರ್ಕಾರ ಹಾಂಗ್ ಕಾಂಗ್ ವಿರುದ್ಧ ಕಿಡಿಕಾರಿದೆ. ಕಡ್ಡಾಯವಾಗಿ ಹಾಕಿಸಿಕೊಳ್ಳಲೇಬೇಕು, ಇಲ್ಲದಿದ್ರೆ ಕೆಲಸ ಕಳೆದುಕೊಳ್ಳೋದಾಗಿ ಹೇಳೋದು ಸರಿಯಲ್ಲ. ಇದು ತಾರತಮ್ಯದಿಂದ ಕೂಡಿದೆ ಅಂತ ಫಿಲಿಫೈನ್ಸ್ ಅಭಿಪ್ರಾಯ ಪಟ್ಟಿದೆ.