ಸೋತರೂ, ನಾವು ಗೆದ್ದಿದ್ದೇವೆ.. ಬಿಜೆಪಿಗೆ ನಮ್ಮ ಶಕ್ತಿ ಗೊತ್ತಾಗಿದೆ : ಸತೀಶ್ ಜಾರಕಿಹೊಳಿ
ಬೆಳಗಾವಿ : ಚುನಾವಣೆಯನಲ್ಲಿ ನಾನು ಸೋತರೂ ನಾವು ಗೆದ್ದಿದ್ದೇವೆ. ಬಿಜೆಪಿಗೆ ನಮ್ಮ ಶಕ್ತಿ ಗೊತ್ತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಚುನಾವಣಾ ಫಲಿತಾಂಶದ ಬಗ್ಗೆ ಇಂದು ಕಾಂಗ್ರೆಸ್ ಸಭಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮಂಗಳಾ ಅಂಗಡಿ ಅವರಿಗೆ ಚುನಾವಣೆ ಆಯೋಗ ಉಪಚುನಾವಣೆಯಲ್ಲಿ ಗೆದ್ದಿರುವ ಸರ್ಟಿಫಿಕೇಟ್ ನೀಡಿರಬಹುದು. ಆದರೆ, ಆ ಸರ್ಟಿಫಿಕೇಟ್ ನಾನು ರಾಜ್ಯದ ಜನರಿಂದ ಪಡೆದಿದ್ದೇನೆ. ನಮ್ಮ ಲೆಕ್ಕಾಚಾರಲ್ಲಿ 70 ಸಾವಿರ ಮೈನಸ್ ಇತ್ತು, ನಮ್ಮ ಜನರು ನನ್ನನ್ನು ಗೆಲುವಿನ ದಡ ಸೇರಿಸಿದ್ದಾರೆ. ತೀವ್ರ ಪೈಪೆÇೀಟಿ ನೀಡಿದ್ದೇವೆ. ಬಿಜೆಪಿಗೆ ನಮ್ಮ ಶಕ್ತಿ ಏನು ಎಂಬುವುದನ್ನು ಚುನಾವಣೆ ಮೂಲಕ ಉತ್ತರ ನೀಡಿದ್ದೇವೆ ಎಂದು ಹೇಳಿದರು.
ಫಲಿತಾಂಶದಿಂದ ಜಿಲ್ಲೆಯ ಜನತೆ ವಿಶ್ವಾಸಕ್ಕೆ ಸ್ವಲ್ಪ ಹಿನ್ನಡೆಯಾಗಿದೆ. ಚುನಾವಣೆ ಸೋತಿರಬಹುದು. ಆದರೆ, ಪಕ್ಷಕ್ಕೆ ಬಹಳಷ್ಟು ಲಾಭವಾಗಿದೆ. ರಾಜ್ಯದ ಜನತೆಯ ಚಿತ್ತ ಬೆಳಗಾವಿ ಚುನಾವಣೆ ಮೇಲೆ ನೆಟ್ಟಿತ್ತು ಅಷ್ಟು ಸಾಕು, ಮುಂದಿನ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿಯಾಗಿದೆ. ಈ ಚುನಾವಣೆಯಲ್ಲಿ ನಾವು ಸೋತರೂ, ನಾವೇ ಗೆದ್ದಿದ್ದೇವೆ. ಟೆಕ್ನಿಕಲ್ ಆಗಿ ಚುನಾವಣೆ ಸೋತಿದ್ದೇವೆ ಅಷ್ಟೆ ಎಂದು ನಗೆ ಬೀರಿದರು.
30 ವರ್ಷಗಳ ರಾಜಕೀಯಲ್ಲಿ ಮೊದಲ ಭಾರಿಗೆ ತೀವ್ರ ಕುತೂಹಲ ಮೂಡಿಸಿದ ಫಲಿತಾಂಶ ಇದಾಗಿದೆ. ಅಲ್ಪ ಹಿನ್ನೆಡೆಯಾಗಿದೆ. ಕೊನೆ ಗಳಿಗೆವರೆಗೂ ನೆಕ್ ಟು ನೆಕ್ ಫೈಟ್ ಕೊಟ್ಟಿದ್ದೇವೆ, ಮತ್ತೊಮ್ಮೆ ಕಾಂಗ್ರೆಸ್ ಪ್ರಭಾವ ಬಿಜೆಪಿಗೆ ತಿಳಿದಿದೆ ಎಂದರು.










