ರೂಪಾಂತರಿ ಕೊರೊನಾ ವೈರಸ್ ನ ಮತ್ತೊಂದು ಆಘಾತಕಾರಿ ಸಂಗತಿ ಬಹಿರಂಗ
ದೇಶಾದ್ಯಂತ ಕೊರೊನಾ 2ನೇ ಅಲೆ ಅತಿ ಭಯನಾಕರೂಪ ಪಡೆದಿದ್ದು, ಸಾವು ನೋವುಗಳ ಸಂಖ್ಯೆ , ದಿನೇದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗ್ತಲೇ ಇದೆ. ಈ ನಡುವೆ ಮತ್ತೊಂದು ಆಘತಕಾರಿ ಮಾಹಿತಿ ಬಹಿರಂಗವಾಗಿದೆ.. ಭಾರತದಲ್ಲಿ ಪತ್ತೆಯಾಗಿರುವ ರೂಪಾಂತರಿ ಕೊರೊನಾ ಪ್ರಬೇಧವೂ ಎರಡೂವರೆ ಪಟ್ಟು ಅಧಿಕವಾಗಿ ಸೋಂಕು ಹರಡುತ್ತಿದ್ದು, ಒಬ್ಬ ವ್ಯಕ್ತಿಯಿಂದ ಮೂವರಿಗೆ ಬೇಗನೇ ಸೋಂಕು ಹರಡುವ ಸಾಧ್ಯತೆ ಹಾಗೂ ಸಾಮರ್ಥ್ಯವಿದೆ ಎಂಬ ಶಾಕಿಂಗ್ ಮಾಹಿತಿ ಬಹಿರಂಗವಾಗಿದೆ.
ಬೆಂಗಳೂರಿನ ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ಮುಂಬೈನ ಟಾಟಾ ಇನ್ಸ್ ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚರ್ ನಡೆಸಿರುವ ಅಧ್ಯಯನದಲ್ಲಿ ಈ ಸಂಗತಿ ಬಹಿರಂಗವಾಗಿದೆ. ರೂಪಾಂತರಿ ಕೊರೊನಾ ಬೇಗ ವ್ಯಾಪಿಸುವ ಸಾಮರ್ಥ್ಯ ಹೊಂದಿರುವ ಕಾರಣ 2ನೇ ಅಲೆ ವೇಳೆ ದುಪ್ಪಟ್ಟು ಕೇಸ್ ಗಳು ದಾಖಲಾಗ್ತಿದೆ ಎಂದು ವರದಿ ತಿಳಿಸಿದೆ.
ದೇಶದಲ್ಲಿ ಕೊರೊನಾಗೆ ಲೆಕ್ಕವಿಲ್ಲದಷ್ಟು ಮಂದಿ ಬಲಿಯಾಗ್ತಿದ್ದಾರೆ. ಅದೆಷ್ಟೋ ಜನರು ತಮ್ಮವರನ್ನ ಕಳೆದುಕೊಂಡು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಸಿನಿ ತಾರಯರು ಸಹ ತಮ್ಮರನ್ನ ಕಳೆದುಕೊಂಡು ನೋವನ್ನ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ತಿದ್ದಾರೆ. ಸೋಂಕಿತರು ಬೆಡ್ ಸಿಗದೇ ಆಕ್ಸಿಜನ್ ಕೊರತೆಯಿಂದ ನರಳಿ ನರಳಿ ಪ್ರಾಣ ಬಿಡುತ್ತಿದ್ದಾರೆ. ಇಂತಹ ಕೆಟ್ಟ ಪರಿಸ್ಥಿತಿಗೆ ಬಂದು ದೇಶ ತಲುಪಿದೆ.
ಸರ್ಕಾರದ ಜೊತೆ ಕೊರೊನಾ ವಿರುದ್ಧ ಹೋರಾಟದಲ್ಲಿ ಜನರು ಕೈಜೋಡಿಸಬೇಕಾಗಿದೆ. ಜನರು ಸುಖಾಸುಮ್ಮನೆ ಅನಗತ್ಯವಾಗಿ ಹೊರಗಡೆ ಓಡಾಡದೇ , ಗುಂಪಿನಲ್ಲಿ ಬೆರೆಯದೇ , ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ತಮ್ಮನ್ನ ತಾವು ರಕ್ಷಣೆ ಮಾಡಿಕೊಳ್ಳಬೇಕಿದೆ.








